alex Certify ನಡುರಸ್ತೆಯಲ್ಲಿ ಬಂಗಾಳ ಹುಲಿಗಳ ಕ್ಯಾಟ್ ವಾಕ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಡುರಸ್ತೆಯಲ್ಲಿ ಬಂಗಾಳ ಹುಲಿಗಳ ಕ್ಯಾಟ್ ವಾಕ್…!

ರಾಯಲ್ ಬಂಗಾಳ ಹುಲಿ ನೋಡಲು ಸ್ವಲ್ಪ ವಿಭಿನ್ನವಾಗಿದ್ದರೂ ಎಲ್ಲರನ್ನೂ ಕೂಡ ಈ ಪ್ರಾಣಿ ಆಕರ್ಷಿಸುತ್ತದೆ. ಆದರೆ ಇದು ಅತ್ಯಂತ ಉಗ್ರವಾಗಿ ಇರುವುದರಿಂದ ಜನರು ದೂರದಿಂದ ನೋಡಲು ಇಷ್ಟಪಡುತ್ತಾರೆ.

ಸದ್ಯ ಈ ಹುಲಿಯ ಫೋಟೋ, ವಿಡಿಯೋಗಳು ವೈರಲ್ ಆಗಿದ್ದು, ಇದನ್ನು ಆನಂದ್ ಮಹೀಂದ್ರಾ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಮಹಾಬಲೇಶ್ವರ-ಪಂಚಗಣಿ ರಸ್ತೆಯಲ್ಲಿ ಎರಡು ಹುಲಿಗಳು ಆಕಸ್ಮಿಕವಾಗಿ ಕಾಣ ಸಿಕ್ಕಿದ್ದು, ಇದರ ಫೋಟೋ ಹಾಗೂ ವಿಡಿಯೋಗಳು ಸದ್ಯ ಭಾರಿ ವೈರಲ್ ಆಗಿದೆ. ಟ್ವಿಟ್ಟರ್ ನಲ್ಲಿ 2,27,000ಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದು, ಹಲವಾರು ಮಂದಿ ಪ್ರತಿಕ್ರಿಯಿಸಿದ್ದಾರೆ.

ದೇಶದ ಜನತೆಗೆ ಭರ್ಜರಿ ಗುಡ್ ನ್ಯೂಸ್: ಇಂಧನ ದರ ಇಳಿಸಲು GST ವ್ಯಾಪ್ತಿಗೆ ಪೆಟ್ರೋಲ್, ಡೀಸೆಲ್, ವಿದ್ಯುತ್..?

ಕತ್ತಲಿನಲ್ಲಿ ರಸ್ತೆಯ ಮಧ್ಯಕ್ಕೆ ಬಂದ ಹುಲಿಯು ನಿಂತಿದ್ದ ದ್ವಿಚಕ್ರ ವಾಹನದತ್ತ ತೆರಳಿದೆ. ನಂತರ ಎರಡೂ ಹುಲಿಗಳು ರಸ್ತೆಯ ಪಕ್ಕದಲ್ಲೇ ನಿಧಾನಕ್ಕೆ ಮುಂದೆ ಹೋಗುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

https://twitter.com/anandmahindra/status/1429426168038674438?ref_src=twsrc%5Etfw%7Ctwcamp%5Etweetembed%7Ctwterm%5E1429426168038674438%7Ctwgr%5E%7Ctwcon%5Es1_&ref_url=https%3A%2F%2Fwww.timesnownews.com%2Fthe-buzz%2Farticle%2Fviral-video-tiger-strolls-onto-the-highway-in-style-clip-fascinates-netizens%2F802708

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...