
ಈ ವಿಡಿಯೋವನ್ನು ಐಎಫ್‌ಎಸ್ ಅಧಿಕಾರಿ ಸಂದೀಪ್ ತ್ರಿಪಾಠಿ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. “ಕ್ಲೋಸ್ ಎನ್ಕೌಂಟರ್ !!! ಕ್ಲೋಸ್ ಶೇವ್…. ಯಾರಿಗೆ…. ಹುಲಿ ಕೂಡ ಗೊಂದಲಕ್ಕೊಳಗಾದಂತಿದೆ!!!!” ಎಂದು ತ್ರಿಪಾಠಿ ವಿಡಿಯೋಗೆ ಶೀರ್ಷಿಕೆ ಬರೆದಿದ್ದಾರೆ.
ಹುಲಿ ಅರಣ್ಯ ಪ್ರದೇಶದ ಹಾದಿಯಲ್ಲಿ ನಡೆಯುತ್ತಿರುವುದರೊಂದಿಗೆ ವಿಡಿಯೋ ಶುರುವಾಗುತ್ತದೆ. ಕೆಲವು ಸೆಕೆಂಡುಗಳ ನಂತರ, ಕರಡಿಯೊಂದು ಪ್ರವೇಶಿಸಿದೆ. ಹುಲಿಯನ್ನು ಹಿಂದೆ ತಿರುಗಿಸುವಂತೆ ಅದು ಪ್ರೇರೇಪಿಸಿದೆ.
ಕರಡಿ ಹುಲಿಯ ಹತ್ತಿರ ನಡೆಯುತ್ತದೆ. ಇದ್ದಕ್ಕಿದ್ದಂತೆ, ಕರಡಿ ತನ್ನ ಹಿಂಗಾಲುಗಳ ಮೇಲೆ ನಿಂತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಹಾಗೂ ಹುಲಿಯು ಕರಡಿ ಮುಂದೆ ನೆಲದ ಮೇಲೆ ಬಗ್ಗಿ ಕುಳಿತುಕೊಂಡಿದೆ.
ಕರಡಿ ಮತ್ತೊಮ್ಮೆ ಎದ್ದು ನಿಂತು ನಂತರ ಸುತ್ತಲೂ ಮನುಷ್ಯರನ್ನು ನೋಡಿದ ನಂತರ ಅಲ್ಲಿಂದ ಓಡಿಹೋಗುತ್ತದೆ. ಹುಲಿ, ಕರಡಿ ಓಡಿದ ದಿಕ್ಕಿನಲ್ಲಿ ನೋಡುತ್ತದೆ ಮತ್ತು ತನ್ನಪಾಡಿಗೆ ನೆಲದ ಮೇಲೆ ಕುಳಿತೇ ಇರುವುದನ್ನು ವಿಡಿಯೋದಲ್ಲಿ ನೋಡಬಹುದು.
ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ಈ ವಿಡಿಯೋ ವೈರಲ್ ಆಗಿದ್ದು, 3,900 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ಈ ವಿಡಿಯೋಗೆ ನೆಟ್ಟಿಗರು ವಿಭಿನ್ನವಾಗಿ ಪ್ರತಿಕ್ರಿಯಿಸಿದ್ದಾರೆ.
ಒಬ್ಬ ಬಳಕೆದಾರರು, “ಬಾಲೂ ಮತ್ತು ಶೇರ್ ಖಾನ್ ಮಾತನಾಡುತ್ತಿದ್ದಾರೆ” ಎಂದರೆ, ಮತ್ತೊಬ್ಬರು “ಇಲ್ಲಿ ಪ್ರಕೃತಿಯ ನಿಯಮ ಮುರಿದಿದೆ. ಕರಡಿ, ಹುಲಿಯ ಬದಲು ಮನುಷ್ಯರನ್ನು ನೋಡಿ ಓಡಿಹೋಯಿತು” ಎಂದು ಪ್ರತಿಕ್ರಿಯಿಸಿದ್ದಾರೆ.