ನ್ಯೂಯಾರ್ಕ್: ಮನುಷ್ಯನಿಗೆ ಅಸಾಧ್ಯವಾದುದು ಯಾವುದೂ ಇಲ್ಲ ಎನ್ನುವುದು ಆಗಾಗ್ಗೆ ಸಾಬೀತು ಆಗುತ್ತಲೇ ಇರುತ್ತವೆ. ಕೆಲವರು ಜೀವವನ್ನು ಪಣಕ್ಕಿಟ್ಟಾದರೂ ಸಾಹಸಮಯ ದೃಶ್ಯಗಳನ್ನು ಮಾಡಿದರೆ, ಇನ್ನು ಕೆಲವರು ಭಯಾನಕ ಎನ್ನಿಸುವ ಆಟಗಳನ್ನು ಆಡಲೂ ಹಿಂಜರಿಯುವುದಿಲ್ಲ. ಅಂಥ ಭಯಾನಕ ಆಟಗಳನ್ನು ಆಡುವ ಮುನ್ನ ಅವುಗಳ ಆಟಿಕೆಗಳನ್ನು ಸಿದ್ಧಪಡಿಸುವವರಿಗೂ ಹ್ಯಾಟ್ಸ್ಆಫ್ ಹೇಳಲೇಬೇಕು.
ಅಂಥದ್ದೇ ಒಂದು ವಿಡಿಯೋ ಇದೀಗ ವೈರಲ್ ಆಗಿದೆ. ಇದು ಅಮೆರಿಕದ ಕೊಲೊರಾಡೋದಲ್ಲಿನ ಗ್ಲೆನ್‌ವುಡ್ ಕಾವರ್ನ್ಸ್ ಅಡ್ವೆಂಚರ್ ಪಾರ್ಕ್‌ನಲ್ಲಿ ಕಾಣಬಹುದು. ಪ್ರಾಯೋಗಿಕ ಹಂತದಲ್ಲಿ ಇದನ್ನು ಶುರು ಮಾಡಲಾಗಿದೆ. ಎಲ್ಲವೂ ಸರಿಯಿದೆಯೇ ಎಂದು ನೋಡಲು ಪರೀಕ್ಷಾರ್ಥವಾಗಿ ಇದನ್ನು ಶುರುಮಾಡಿರುವ ವಿಡಿಯೋ ವೈರಲ್ ಆಗಿದೆ.
ಸಮುದ್ರ ಮಟ್ಟದಿಂದ 7 ಸಾವಿರ ಅಡಿಗಳಷ್ಟು ಎತ್ತರಲ್ಲಿ ರೋಲರ್ ಕೋಸ್ಟರ್ ತಯಾರಿಸಲಾಗಿದೆ. ‘ಡಿಫಿಯನ್ಸ್’ ಹೆಸರಿನ ಭಯಾನಕ ಸವಾರಿ ಇದರ ಮೇಲೆ ಮಾಡಬಹುದಾಗಿದೆ. ಇಷ್ಟು ಎತ್ತರದಿಂದ ರೋಲರ್ ಕೋಸ್ಟರ್ ಕೆಳಕ್ಕೆ ಧುಮುಕುವ ಝಂ ಎನಿಸುವ ರೋಮಾಂಚಕಾರಿ ಆಟ ಇದಾಗಿದ್ದು, ಬೇಸ್‌ಗೆ ಬರುತ್ತಿರುವಾಗ ಜನರು ಕಿರುಚುತ್ತಿರುವುದನ್ನು ಕಾಣಬಹುದಾಗಿದೆ.
ರೋಲರ್ ಕೋಸ್ಟರ್ ಅಮೆರಿಕದ ಏಕೈಕ ಪರ್ವತ-ಮೇಲಿನ ಥೀಮ್ ಪಾರ್ಕ್‌ನಲ್ಲಿದೆ. ಇದು 110-ಅಡಿ ಫ್ರೀಫಾಲ್ ಹೊಂದಿದೆ. ಲ್ಯಾಡ್‌ಬೈಬಲ್ ಪ್ರಕಾರ ಇದು ಅಮೆರಿಕದ ಅತಿ ಎತ್ತರದ ರೋಲರ್‌ಕೋಸ್ಟರ್ ಆಗಿದೆ. ಧೈರ್ಯ ಇದ್ದವರು ಇದರ ಮೇಲೆ ಒಮ್ಮೆ ಸವಾರಿ ಮಾಡಿನೋಡಿ ಎಂದು ನೆಟ್ಟಿಗರು ಹೇಳುತ್ತಿದ್ದಾರೆ.