ಕೆನಡಾದ ಒಂಟಾರಿಯೋದ ಹೆದ್ದಾರಿಯೊಂದರ ಮೇಲೆ ನಿರ್ಮಿಸಲಾದ ಪಾದಚಾರಿ ಮೇಲ್ಸೇತುವೆಯೊಂದು ಗಿನ್ನೆಸ್ ವಿಶ್ವದಾಖಲೆ ಪುಸ್ತಕವನ್ನು ಸೇರಿದೆ.
ಹೆದ್ದಾರಿ 401ರ ಮೇಲೆ ನಿರ್ಮಾಣವಾದ ಈ ಸೇತುವೆಯನ್ನು ಮೆಟ್ರೋಲಿಂಕ್ಸ್ ಕಟ್ಟಿದ್ದು, 820 ಅಡಿ ಉದ್ದವಿದೆ. ಪಿಕರಿಂಗ್ ಗೋ ರೈಲ್ವೇ ನಿಲ್ದಾಣವನ್ನು ಪಿಕರಿಂಗ್ ನಗರ ಕೇಂದ್ರದೊಂದಿಗೆ ಸಂಪರ್ಕಿಸುವ ಈ ಸೇತುವೆಯು ಹೆದ್ದಾರಿಯ 14 ಪಥಗಳು, ರೈಲ್ವೆಯ ಆರು ಹಳಿಗಳು ಹಾಗೂ ನಗರ ರಸ್ತೆಯನ್ನು ಹಾದು ಹೋಗುತ್ತದೆ.
ಪಾದಚಾರಿಗಳಲ್ಲಿ ನಡುಕ ಹುಟ್ಟಿಸಿದ ಹಸಿದ ಮೊಸಳೆ
ಸೆಪ್ಟೆಂಬರ್ 2018ರಲ್ಲೇ ನಿರ್ಮಾಣ ಕಾರ್ಯ ಪೂರ್ಣಗೊಂಡರೂ 2020 ಗಿನ್ನೆಸ್ ವಿಶ್ವದಾಖಲೆಗೆ ಈ ಸೇತುವೆಯನ್ನು ಸ್ಪರ್ಧೆಗೆ ಕಳಿಸಲಾಯಿತೆಂದು ಮೆಟ್ರೋಲಿಂಕ್ಸ್ ವಕ್ತಾರೆ ಅನ್ನಿ ಮಾರಿ ಐಕಿನ್ಸ್ ತಿಳಿಸಿದ್ದಾರೆ. ದಾಖಲೆಯನ್ನು ಊರ್ಜಿತಗೊಳಿಸುವ ಕ್ರಿಯೆಗೆ ಒಂದು ವರ್ಷ ತಗುಲಿದೆ.
“ನಮ್ಮಲ್ಲಿ ಇಷ್ಟೇ ಉದ್ದವಿರುವ ಮತ್ತೊಂದು ಸೇತುವೆ ಜಗತ್ತಿನಲ್ಲಿ ಇರುವ ಬಗ್ಗೆ ಪತ್ತೆ ಮಾಡಲು ಸಾಧ್ಯವಿಲ್ಲವೆಂದೂ ನಮಗೆ ಗೊತ್ತಿದ್ದರಿಂದ ಈ ಬಗ್ಗೆ ಖಾತ್ರಿ ಪಡಿಸಿಕೊಳ್ಳಲು ಕಾಲ ಹಿಡಿಯಿತು” ಎಂದು ಐಕಿನ್ಸ್ ತಿಳಿಸಿದ್ದಾರೆ.