ಪುಟ್ಟ ಹುಡುಗಿಯೊಬ್ಬಳೊ ಓದೋಕೆ ಬೋರ್ ಆಗತ್ತೆ ಎಂದು ಅಳುತ್ತಿರುವ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಚಾಕಲೇಟ್ ತಿನ್ನುತ್ತಾ, ಕಣ್ಣು ಒರೆಸಿಕೊಳ್ಳುತ್ತಲೆ ಪಟ ಪಟ ಮಾತಾಡುತ್ತಿರುವ ಈ ಪುಟ್ಟ ಹುಡುಗಿಗೆ ಓದೋಕೆ, ಬರೆಯೋಕೆ ಬೋರ್ ಆಗತ್ತಂತೆ. ನಾನ್ ಎಷ್ಟು ಓದ್ಲಿ ಅಮ್ಮಾ ನನ್ಗೆ ಹಿಂಸೆ ಆಗುತ್ತಿದೆ ಎಂದು ತನ್ನ ತಾಯಿಯೊಂದಿಗೆ ವಾದ ಮಾಡುತ್ತಿರುವಾಗ ಆಕೆಯ ತಾಯಿ ಈ ವಿಡಿಯೋ ಚಿತ್ರಿಸಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
Viral Video: ಸಲ್ಮಾನ್ ಖಾನ್ ಹಾಡಿಗೆ ಸ್ಟೆಪ್ ಹಾಕಿ ರಂಜಿಸಿದ ಡಾನ್ಸಿಂಗ್ ಡ್ಯಾಡ್
ದಿನ ಊಟ, ಬಿಸ್ಕೆಟ್, ಹಣ್ಣು ತಿನ್ನೋ ಹಾಗೇ ಪ್ರತಿದಿನ ಓದ್ಕೋಬೇಕು ಎಂದು ತನ್ನ ತಾಯಿ ಹೇಳಿದಾಗ ಪುಟ್ಟ ಹುಡುಗಿ ನೀಡಿರುವ ರಿಪ್ಲೈ ತುಂಬಾ ಮಜವಾಗಿದೆ. ನನ್ಗೆ ದಿನ ಓದ್ಕೊಂಡು ಸಾಕಾಗಿದೆ, ನನ್ಗೆ ಎಲ್ರು ಹೇಳ್ತೀರಾ, ಒದೆ ಬಿದ್ರು ಪರವಾಗಿಲ್ಲ ನಾನು ಓದ್ಕೋಳೊಲ್ಲಾ ಎಂದು ತನ್ನ ತಾಯಿಯೊಂದಿಗೆ ಮುದ್ದಾಗಿ ಜಗಳ ಮಾಡಿದ್ದಾಳೆ.
ನೀನು ಇಂದು ಓದಿಲ್ಲಾ ದೊಡ್ಡವಳಾದ್ಮೇಲೆ ಏನ್ ಮಾಡ್ತಿಯಾ ಎಂದು ಕೇಳಿದಾಗ ನನ್ನ ಗಂಡ ನೋಡ್ಕೊತಾನೆ. ಅವ್ನೆ ನನ್ಗೆ ಖರ್ಚು ಮಾಡ್ತಾನೆ ಎಂದಿದ್ದಾಳೆ. ಜೊತೆಗೆ ತನ್ನ ಸಹೋದರನಿಗೆ ಏನು ಹೇಳಲ್ಲಾ ಎಲ್ರು ನನ್ಗೆ ಹೇಳ್ತೀರಾ, ಅವ್ನು ಮಾಡಿದ್ದಕ್ಕೆಲ್ಲಾ ನಾನು ಬೈಸ್ಕೊಬೇಕು ಎಂದು ಅಳುತ್ತಲೆ, ತನ್ನ ಮುದ್ದು ಧ್ವನಿಯಲ್ಲಿ ತಾಯಿ ಕೇಳುವ ಪ್ರಶ್ನೆಗಳಿಗೆ ಉತ್ತರಿಸಿರುವ ಪುಟ್ಟ ಪೋರಿಯ, ಈ ವಿಡಿಯೋ ಎಲ್ಲೆಡೆ ವೈರಲ್ ಆಗ್ತಿದೆ.
https://youtube.com/watch?v=GpD7ZJ0zHLw&feature=share