
ಪ್ರತಿಯೊಂದು ಭಾರತೀಯ ಅಡುಗೆ ಮನೆಯಲ್ಲಿ ಬೆಳ್ಳುಳ್ಳಿ ಕಂಡು ಬರುತ್ತದೆ. ಅದರಲ್ಲೂ ನಾನ್ ವೆಜ್ ಪದಾರ್ಥ ತಯಾರಿಸಲಂತೂ ಬೆಳ್ಳುಳ್ಳಿ ಇಲ್ಲದಿದ್ರೆ ಅಡುಗೆಯೇ ಅಪೂರ್ಣ. ಅಂದ ಹಾಗೆ, ನೀವು ನಿಯಮಿತವಾಗಿ ಅಡುಗೆ ಮಾಡುತ್ತಿದ್ದರೆ, ಬೆಳ್ಳುಳ್ಳಿಯ ಸಿಪ್ಪೆ ತೆಗೆಯುವುದು ಎಷ್ಟು ಕಷ್ಟ ಎಂಬುದು ನಿಮಗೆ ತಿಳಿದಿರುತ್ತದೆ. ಇದಕ್ಕೆ ಸಾಕಷ್ಟು ತಾಳ್ಮೆ ಹಾಗೂ ತಂತ್ರ ಕೂಡ ಬೇಕಾಗುತ್ತದೆ.
ಆದರೆ ಚಿಂತಿಸಬೇಡಿ, ಸರಳವಾದ ಅಡುಗೆಮನೆ ಹ್ಯಾಕ್ ಈಗ ಬೆಳ್ಳುಳ್ಳಿ ಸಿಪ್ಪೆ ಸುಲಿಯುವ ನಿಮ್ಮ ಕೆಲಸವನ್ನು ತುಂಬಾ ಸುಲಭಗೊಳಿಸುತ್ತದೆ. ನೀವು ಪೂರ್ಣ ಗಾತ್ರದ ಬೆಳ್ಳುಳ್ಳಿಯನ್ನು ತೆಗೆದುಕೊಂಡು ಅದನ್ನು ಚಾಕುವಿನಿಂದ ಅಡ್ಡಲಾಗಿ ಕತ್ತರಿಸಬೇಕು. ನಂತರ, ಅದನ್ನು ಉಲ್ಟಾ ಇಟ್ಟು ಚಾಕುವಿನಿಂದ ಮೇಲೆ ಒತ್ತಬೇಕು. ಈಗ ಬೆಳ್ಳುಳ್ಳಿ ಸಿಪ್ಪೆ ತೆಗೆದ್ರೆ ಪೂರ್ಣವಾಗಿ ಹೊರ ಬರುತ್ತದೆ.
ಸದ್ಯ, ಬೆಳ್ಳುಳ್ಳಿ ಸಿಪ್ಪೆ ತೆಗೆಯುವ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಹಲವಾರು ಮಂದಿ ಈ ತಂತ್ರದಿಂದ ಪ್ರಭಾವಿತರಾಗಿದ್ದಾರೆ. ಆದರೆ, ಇನ್ನೂ ಕೆಲವರು ಇದನ್ನು ಎಡಿಟ್ ಮಾಡಲಾಗಿದೆ ಎಂದೆಲ್ಲಾ ಟೀಕಿಸಿದ್ದಾರೆ. ಆದರೆ, ಈ ರೀತಿ ಮಾಡುವುದರಿಂದ ನಿಜವಾಗಿಯೂ ಫಲಿತಾಂಶ ಚೆನ್ನಾಗಿ ಬರುತ್ತದೆ ಎಂದೆನಿಸಬೇಕೆಂದ್ರೆ ನೀವು ಪ್ರಯತ್ನಿಸಿ..