ಮಧ್ಯರಾತ್ರಿ ಇಡ್ಲಿ ತಿನ್ನಲು ಆಸೆ ಪಟ್ಟರೆ, ದಕ್ಷಿಣ ಭಾರತದ ಎಲ್ಲಾ ರೆಸ್ಟೋರೆಂಟ್‌ಗಳು ಬಂದ್ ಆಗಿದ್ದು, ನಿಮಗೂ ಮ್ಯಾಗಿಗಿಂತ ಹೆಚ್ಚು ಅಡುಗೆ ಮಾಡೋದು ಗೊತ್ತಿಲ್ಲವೇ ? ಹಾಗಾದ್ರೆ 24 ಗಂಟೆಗಳ ಕಾಲ ಕಾರ್ಯ ನಿರ್ವಹಿಸುವ ಇಡ್ಲಿ ATM ಗೆ ಹೋಗಿ. ಹೌದು, ಅಂತದೊಂದು ವ್ಯವಸ್ಥೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿದೆ.
ಬೆಂಗಳೂರಿನ 24/7 ಇಡ್ಲಿ ಎಟಿಎಂ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಯುವತಿಯೊಬ್ಬರು ತೋರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ಬಿ ಪದ್ಮನಾಭನ್ ಎಂಬವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, ಈಗಾಗಲೇ ಲಕ್ಷಾಂತರ ಮಂದಿ ಇದನ್ನು ವೀಕ್ಷಿಸಿದ್ದಾರೆ. ಕ್ಲಿಪ್ ಫ್ರೆಶ್‌ಶಾಟ್ ಹೆಸರಿನ ಇಡ್ಲಿ ಎಟಿಎಂ ಔಟ್‌ಲೆಟ್ ಅಂಗಡಿ ಇದಾಗಿದೆ. ಇದನ್ನು ಪಡೆದುಕೊಳ್ಳುವುದು ಹೇಗೆ ಮಾಡಬೇಕೆಂದು ಯುವತಿ ತೋರಿಸುತ್ತಾರೆ.
ಯಂತ್ರವು 50 ಸೆಕೆಂಡುಗಳಲ್ಲಿ ಇಡ್ಲಿಯನ್ನು ತಯಾರಿಸುವುದನ್ನು ಮತ್ತು ಅದನ್ನು ಹಾಳೆಯಿಂದ ಸುತ್ತಿದ ಪ್ಯಾಕ್ ನಲ್ಲಿ ಇರಿಸಿರುವುದನ್ನು ಕಾಣಬಹುದು. ಯುವತಿಯೂ ರುಚಿ ಪರೀಕ್ಷೆ ಮಾಡಿ ಇಡ್ಲಿ ಚೆನ್ನಾಗಿದೆ ಎಂದು ಹೇಳುತ್ತಾರೆ. ಕೆಲವು ಟ್ವಿಟ್ಟರ್ ಬಳಕೆದಾರರು ಈ ತಂತ್ರಜ್ಞಾನದಿಂದ ಆಶ್ಚರ್ಯಚಕಿತರಾಗಿದ್ದರೆ, ಇನ್ನು ಕೆಲವರು ಹೆಚ್ಚುವರಿ ಚಟ್ನಿ ಅಥವಾ ಸಾಂಬಾರ್ ಅನ್ನು ಹೇಗೆ ಕೇಳುತ್ತಾರೆ ಎಂದು ಪ್ರಶ್ನಿಸಿದ್ದಾರೆ.