
ಹೌದು, ಬಾಯಾರಿದ ಎಮ್ಮೆಯೊಂದು ಬೋರ್ ವೆಲ್ ನಿಂದ ನೀರು ಕುಡಿದಿದೆ. ತನ್ನ ಕೊಂಬನ್ನು ಬಳಸಿ ಬೋರ್ ವೆಲ್ ನ ಹ್ಯಾಂಡಲ್ ಅನ್ನು ಎಮ್ಮೆ ಪಂಪ್ ಮಾಡುತ್ತದೆ. ಈ ವೇಳೆ ನಳಿಕೆಯಿಂದ ನೀರು ಹೊರಬರುತ್ತಿದ್ದಂತೆ ಎಮ್ಮೆ ಅದನ್ನು ಕುಡಿಯುತ್ತದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಎಮ್ಮೆ ನೀರು ಕುಡಿಯುವುದಕ್ಕಾಗಿ ತನ್ನ ಬುದ್ಧಿವಂತಿಕೆಯನ್ನು ಪ್ರದರ್ಶಿಸಿದ್ದಕ್ಕೆ ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ.
ಐಪಿಎಸ್ ಅಧಿಕಾರಿ ದೀಪಾಂಶು ಕಬ್ರಾ ಅವರು ಟ್ವಿಟ್ಟರ್‌ನಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಕಾಬ್ರಾ 1997ರ ಬ್ಯಾಚ್ ಐಪಿಎಸ್ ಅಧಿಕಾರಿಯಾಗಿದ್ದು, ಛತ್ತೀಸ್‌ಗಢದ ಹೆಚ್ಚುವರಿ ಸಾರಿಗೆ ಆಯುಕ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಮನಸ್ಸಿಗೆ ಮುದ ನೀಡುವ ಕ್ಲಿಪ್ ಗೆ ಸುಮಾರು 15,000 ಲೈಕ್ಸ್ ಗಳನ್ನು ಗಳಿಸಿದೆ. ಅನೇಕರು ಎಮ್ಮೆಯ ಬುದ್ಧಿವಂತಿಕೆಯನ್ನು ಶ್ಲಾಘಿಸಿದ್ದಾರೆ. ಸ್ವಯಂ ಅವಲಂಬನೆಗೆ ಇದೊಂದು ಪರಿಪೂರ್ಣ ಉದಾಹರಣೆಯಾಗಿದೆ ಎಂದೆಲ್ಲಾ ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ.