ಗಿಳಿ ಜಾತಿಗೆ ಸೇರಿದ ಕೋಕಾಟೂಸ್ಗಳು ತಮ್ಮ ಬುದ್ಧಿವಂತ ಗುಣದ ಕಾರಣದಿಂದಾಗಿಯೇ ಸರ್ಕಸ್ಗಳಲ್ಲಿ, ಜಾದೂ ಪ್ರದರ್ಶನಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ತಲೆಯ ಹಿಂದಿರುವ ವಿಶೇಷವಾದ ಜುಟ್ಟದ ಮೂಲಕವೇ ಇವುಗಳನ್ನ ಸುಲಭವಾಗಿ ಗುರುತಿಸಬಹುದಾಗಿದೆ.
ಕೋಕಾಟೂಸ್ಗಳು ಬುದ್ಧಿವಂತ ಪಕ್ಷಿಗಳು ಅನ್ನೋದು ಎಲ್ಲರಿಗೂ ತಿಳಿದಿರುವ ವಿಚಾರ . ಆದರೆ ಈ ಹಕ್ಕಿಗಳು ಎಷ್ಟು ಬುದ್ಧಿವಂತ ಇವೆ ಅನ್ನೋದನ್ನ ವಿಜ್ಞಾನಿಗಳು ಕಂಡು ಹಿಡಿದಿದ್ದಾರೆ.
ಆಕ್ಸ್ಫರ್ಡ್ ಯೂನಿವರ್ಸಿಟಿ, ವಿಯೆನ್ನಾ ಯೂನಿವರ್ಸಿಟಿ ಹಾಗೂ ಮ್ಯಾಕ್ಸ್ ಪ್ಲಾಂಕ್ ವಿಶ್ವವಿದ್ಯಾಲಯ ನಡೆಸಿದ ಅಧ್ಯಯನದಲ್ಲಿ ಈ ಪುಟ್ಟ ಹಕ್ಕಿಗಳು ಅತ್ಯಂತ ಕ್ಲಿಷ್ಟವಾದ ಮೆಕಾನಿಕಲ್ ಪಜಲ್ಗಳನ್ನು ಬಿಡಿಸಿವೆ.
ಮ್ಯಾಕ್ಸ್ ಪ್ಲಾಂಕ್ ವಿಶ್ವವಿದ್ಯಾಲಯ ಶೇರ್ ಮಾಡಿರುವ ವಿಡಿಯೋದಲ್ಲಿ ಈ ಪಕ್ಷಿಗಳು ಕಸದಬುಟ್ಟಿಯ ಮುಚ್ಚಳವನ್ನ ತೆಗೆದು ತಮಗೆ ಬೇಕಾದ ವಸ್ತುವನ್ನ ಆಯ್ಕೆ ಮಾಡಿಕೊಂಡಿವೆ.
ಕೋಕಾಟೂಸ್ಗಳ ನಡವಳಿಕೆಯನ್ನ ತಿಳಿದುಕೊಳ್ಳಲು ನಡೆಸಲಾದ ಈ ಅಧ್ಯಯನದಲ್ಲಿ ಬಂದ ಫಲಿತಾಂಶ ಕಂಡು ಸ್ವತಃ ವಿಜ್ಞಾನಿಗಳೇ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಜರ್ನಲ್ ಸೈನ್ಸ್ನಲ್ಲಿ ಈ ಅಧ್ಯಯನದ ಬಗ್ಗೆ ಸಂಪೂರ್ಣ ಮಾಹಿತಿಯನ್ನ ಬಹಿರಂಗಪಡಿಸಲಾಗಿದೆ.