ಧೈರ್ಯ ಮತ್ತು ಸಮಯಪ್ರಜ್ಞೆ ಪ್ರದರ್ಶಿಸಿದ ತೆಲಂಗಾಣದ ಹೋಮ್ ಗಾರ್ಡ್ ಒಬ್ಬರು ಪೊಲೀಸರೊಂದಿಗೆ ಪ್ರವಾಹದ ಹೊಳೆಯಲ್ಲಿ ಪೊದೆಗಳ ಒಳಗೆ ಸಿಕ್ಕಿಬಿದ್ದ ನಾಯಿಯನ್ನು ರಕ್ಷಿಸಿದ್ದಾರೆ.
ಟ್ವಿಟರ್‌ನಲ್ಲಿ ಮತ್ತೆ ಕಾಣಿಸಿಕೊಂಡಿರುವ ವೀಡಿಯೋವೊಂದರಲ್ಲಿ, ಜೋರಾಗಿ ಹರಿಯುವ ಹೊಳೆಯಲ್ಲಿ ಸಿಲುಕಿದ ನಾಯಿಯನ್ನು ರಕ್ಷಿಸಲು ಗಾರ್ಡ್ ತನ್ನ ಜೀವವನ್ನು ಪಣಕ್ಕಿಡುವುದನ್ನು ನೋಡಬಹುದು. ವೀಡಿಯೊದಲ್ಲಿ, ಮುಜೀಬ್-ಉರ್-ರೆಹಮಾನ್ ತನ್ನ ಸುರಕ್ಷತೆಯ ಬಗ್ಗೆ ಲೆಕ್ಕಾಚಾರ ಮಾಡದೇ ನಾಯಿಯನ್ನು ಉಳಿಸಲು ತುಂಬಿ ಹರಿಯುವ ಹೊಳೆಗೆ ಹೆಜ್ಜೆ ಹಾಕಿದ್ದಾರೆ. ನಂತರ ಅವರ ಬೆಂಬಲಕ್ಕಾಗಿ ಜೆಸಿಬಿ ಅಗೆಯುವ ಯಂತ್ರವನ್ನು ಹಿಡಿದಿದ್ದು, ನಾಯಿಯನ್ನು ಸುರಕ್ಷಿತವಾಗಿ ತರಲು ಅದರ ನೆರವು ಪಡೆದಿದ್ದಾರೆ.
BIG BREAKING NEWS: ಮತ್ತಷ್ಟು ಕುಸಿತ ಕಂಡ ಕೊರೊನಾ ಸೋಂಕಿತರ ಸಂಖ್ಯೆ; ಆದರೆ ಒಂದೇ ದಿನದಲ್ಲಿ 871 ಜನ ಮಹಾಮಾರಿಗೆ ಬಲಿ
ಘಟನೆಯು ನಾಗರ್‌ಕರ್ನೂಲ್ ಜಿಲ್ಲೆಯಲ್ಲಿ ನಡೆದಿದೆ. ಈ ಕ್ಲಿಪ್ ಅನ್ನು ಐಪಿಎಸ್ ಅಧಿಕಾರಿ ದೀಪಾಂಶು ಕಾಬ್ರಾ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. “ಪ್ರವಾಹದ ಅಲೆಗಳಲ್ಲಿ ನಾಯಿ ಸಿಕ್ಕಿಬಿದ್ದಿರುವುದನ್ನು ನೋಡಿ, ತೆಲಂಗಾಣ ಹೋಮ್ ಗಾರ್ಡ್ ಮುಜೀಬ್ ತಕ್ಷಣವೇ ಜೆಸಿಬಿಗೆ ಕರೆ ಮಾಡಿದರು ಮತ್ತು ನಾಯಿಯನ್ನು ರಕ್ಷಿಸಲು ಸ್ವತಃ ಅಲೆಗಳಿಗೆ ಇಳಿದರು. ಅವರ ಈ ಹುರುಪಿಗೆ ಹೃತ್ಪೂರ್ವಕ ನಮನಗಳು. ಖಾಕಿ ಧರಿಸಿದವರು ಮಾನವೀಯತೆಯ ಸೇವೆಗಾಗಿ ಯಾವುದೇ ಅಪಾಯವನ್ನು ಮೆಟ್ಟಿ ನಿಲ್ಲಲು ಎಂದಿಗೂ ಹಿಂಜರಿಯುವುದಿಲ್ಲ,”ಎಂದು ಕಾಬ್ರಾ ವೀಡಿಯೊಗೆ ಶೀರ್ಷಿಕೆ ನೀಡಿದ್ದಾರೆ.