ನ್ಯೂಯಾರ್ಕ್: ಅಮ್ಯೂಸ್ ಮೆಂಟ್ ಪಾರ್ಕ್ ಗಳೆಂದ್ರರೆ ಸಖತ್ ಥ್ರಿಲ್ ಇರುತ್ತದೆ. ಭಯವಾದರೂ ಹಲವು ಮಂದಿ ಇಲ್ಲಿ ಕೂತು ಮಜಾ ಮಾಡೋದನ್ನು ಇಷ್ಟಪಡುತ್ತಾರೆ. ತೂಗುವ ತೊಟ್ಟಿಲಿನಲ್ಲಿ ಕೂತು ಜೋರಾಗಿ ಕಿರುಚಿಕೊಳ್ಳುತ್ತಾರೆ ಕೂಡ. ಮೊದಲೇ ಭಯದಿಂದ ಕೂತಿರಬೇಕಿದ್ದರೆ ಪಕ್ಷಿ ಬಂದು ಉಪಟಳ ಮಾಡಿದರೆ ಹೇಗಿರಬೇಡ ಹೇಳಿ..?
ಹೌದು, ಇಂತಹ ಒಂದು ವಿಲಕ್ಷಣ ಘಟನೆ ಅಮೆರಿಕದ ನ್ಯೂಜೆರ್ಸಿಯಲ್ಲಿನ ಅಮ್ಯೂಸ್ ಮೆಂಟ್ ಪಾರ್ಕ್ ಒಂದರಲ್ಲಿ ನಡೆದಿದೆ. ಗಂಟೆಗೆ 120 ಕಿ.ಮೀ ವೇಗದಲ್ಲಿ ಗಾಳಿಯಲ್ಲಿ ಹಾರುವ ತೊಟ್ಟಿಲಿನಲ್ಲಿ ಯುವತಿಯರಿಬ್ಬರು ಕುಳಿತಿದ್ದರು. ತೊಟ್ಟಿಲು ಒಮ್ಮೆಲೆ ಮೇಲಕ್ಕೆ ಹಾರಿದಾಗ ಪಕ್ಷಿ ಯುವತಿಯ ಮುಖಕ್ಕೆ ಬಂದು ಅಪ್ಪಳಿಸಿದೆ. ಯುವತಿಯು ಹಕ್ಕಿಯನ್ನು ಕಷ್ಟಪಟ್ಟು ದೂರತಳ್ಳಿದ್ದಾಳೆ.
ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಯುವತಿಯು, ‘’ಅವುಗಳು ಹಿಂದಕ್ಕೆ ಹೋಗುವುದಿಲ್ಲ ಎಂದು ನನಗೆ ಗೊತ್ತಿತ್ತು. ಅದು ನನ್ನ ಮುಖಕ್ಕೆ ಹೊಡೆದಿತ್ತು. ಹಾಗಾಗಿ ನನಗೆ ಏನು ಮಾಡಬೇಕೆಂದು ತೋಚಲಿಲ್ಲ. ಕೂಡಲೇ ಅವುಗಳನ್ನು ಹಿಡಿದು ದೂರತಳ್ಳಿದೆ’’ ಎಂದು ಹೇಳಿದ್ದಾಳೆ. ಅದೃಷ್ಟವಶಾತ್ ಯುವತಿಗೆ ಯಾವುದೇ ತರಹದ ತರಚು ಗಾಯಗಳಾಗಿಲ್ಲ.