ಹೊಸ ಭಾಷೆಯನ್ನು ಕಲಿಯುವುದು ಕೆಲವು ಮಕ್ಕಳಿಗೆ ಕಠಿಣವಾಗಬಹುದು. ಆದರೆ ಶಿಕ್ಷಕರು ಮಕ್ಕಳಿಗೆ ಕಲಿಕೆಯನ್ನು ಸಲೀಸು ಮಾಡಲು ಹೊಸ ಹೆಜ್ಜೆಯನ್ನು ತೆಗೆದುಕೊಳ್ಳುತ್ತಾರೆ.
ಶಾಲಾ ಮಕ್ಕಳು ಹಿಂದಿ ವ್ಯಾಕರಣದ ಮೂಲಭೂತ ಅಂಶಗಳನ್ನು ಕವನ ಮತ್ತು ನೃತ್ಯದ ರೂಪದಲ್ಲಿ ವಿವರಿಸುವ ವೀಡಿಯೊ ಅಂತಹ ಒಂದು ಉದಾಹರಣೆಯಾಗಿದೆ. ಇದು ನೆಟ್ಟಿಗರನ್ನು ಪ್ರೇರೇಪಿಸಿದೆ. ಅವರಲ್ಲಿ ಹೆಚ್ಚಿನವರು ಮಕ್ಕಳಿಗೆ ಕಲಿಕೆಯ ಪ್ರಕ್ರಿಯೆಯನ್ನು ಸುಲಭ ಮತ್ತು ವಿನೋದಮಯವಾಗಿಸಿದ ಶಿಕ್ಷಕರನ್ನು ಶ್ಲಾಘಿಸಿದ್ದಾರೆ.
ಐಎಎಸ್ ಅಧಿಕಾರಿ ಅರ್ಪಿತ್ ವರ್ಮಾ ಅವರು ಟ್ವಿಟರ್ನಲ್ಲಿ ಹಂಚಿಕೊಂಡಿರುವ ಕ್ಲಿಪ್ನಲ್ಲಿ ಹಿಂದಿ ವ್ಯಾಕರಣದ ಮೂಲಭೂತ ಅಂಶಗಳನ್ನು ಕವನ ಮತ್ತು ನೃತ್ಯದ ರೂಪದಲ್ಲಿ ವಿವರಿಸುವ ಮಕ್ಕಳ ಗುಂಪನ್ನು ತೋರಿಸುತ್ತದೆ.
ಹಾಡನ್ನು ಸರಿಯಾಗಿ ಮುಗಿಸಲು ಶಿಕ್ಷಕರು ಮಕ್ಕಳನ್ನು ಪ್ರೇರೇಪಿಸುವುದರೊಂದಿಗೆ ವೀಡಿಯೊ ಕೊನೆಗೊಳ್ಳುತ್ತದೆ. ಅದ್ಭುತ !! ಶಾಲಾ ವಿದ್ಯಾರ್ಥಿಗಳು ಕವನ ಮತ್ತು ನಾಟಕದ ಮೂಲಕ ಹಿಂದಿ ವ್ಯಾಕರಣವನ್ನು ಹೇಗೆ ಕಲಿಯುತ್ತಿದ್ದಾರೆ ಎಂಬುದನ್ನು ನೋಡಿ ಎಂಬ ಶೀರ್ಷಿಕೆ ವಿಡಿಯೋಗಿದೆ. ಇದು 149ಕೆ ವೀಕ್ಷಣೆಗಳನ್ನು ಗಳಿಸಿದ್ದು, ಸಾವಿರಗಟ್ಟಲೆ ಕಾಮೆಂಟ್ ಪಡೆದಿದೆ.