ಮ್ಯಾಗಿ ಭಾರತೀಯರ ಅಚ್ಚುಮೆಚ್ಚಿನ ಆಹಾರಗಳಲ್ಲಿ ಒಂದಾಗಿದೆ. ಈ ಖಾದ್ಯದ ಅತ್ಯಂತ ಜನಪ್ರಿಯತೆಯ ಕಾರಣದಿಂದಾಗಿ, ಹಲವಾರು ಮಂದಿ ಇದನ್ನು ವಿಭಿನ್ನ ಶೈಲಿಯಲ್ಲಿ ಪ್ರಯೋಗಿಸಿದ್ದಾರೆ. ವೆಜ್ ಮ್ಯಾಗಿ, ಎಗ್ಗ್ ಮ್ಯಾಗಿ, ಚಿಕನ್ ಮ್ಯಾಗಿ ಇವುಗಳನ್ನು ಬಹುಶಃ ನೀವು ತಯಾರಿಸಿರಬಹುದು. ಆದರೆ ಎಂದಾದ್ರೂ ಅಫ್ಜಾ ಮ್ಯಾಗಿಯನ್ನು ಸವಿದಿದ್ದೀರಾ..?
ಹೌದು, ಬೀದಿಬದಿ ವ್ಯಾಪಾರಿಯೊಬ್ಬರು ರೂಹ್ ಅಫ್ಜಾ ಮ್ಯಾಗಿ ತಯಾರಿಸುತ್ತಿರುವ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ವ್ಯಾಕ್ ಎಂದು ಅಸಹ್ಯ ಪಟ್ಟಿದ್ದಾರೆ. ವಿಡಿಯೋವನ್ನು ಆಹಾರ ಬ್ಲಾಗರ್ ಅರ್ಜುನ್ ಚೌಹಾನ್ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ವ್ಯಾಪಾರಿ ಮೊದಲಿಗೆ ರೂಹಾಫ್ಜಾ ಬಾಟಲಿಯನ್ನು ಅಲ್ಲಾಡಿಸಿ ಮ್ಯಾಗಿಯ ಪ್ಲೇಟ್ಗೆ ಸೇರಿಸಿದ್ದಾರೆ. ನಂತರ ಆಹಾರ ಬ್ಲಾಗರ್ ರೂಹಾಫ್ಜಾ ಮ್ಯಾಗಿಯನ್ನು ಸವಿದಿದ್ದಾರೆ. ಆತನ ಮುಖದ ಭಾವನೆಯಲ್ಲೇ ಮ್ಯಾಗಿ ಟೇಸ್ಟ್ ಹೇಗಿದೆ ಎಂಬುದು ಗೊತ್ತಾಗುತ್ತದೆ.
ಆನ್ಲೈನ್ನಲ್ಲಿ ಹಂಚಿಕೊಂಡಾಗಿನಿಂದ ವಿಡಿಯೋವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಅನೇಕರು ವಿಲಕ್ಷಣವಾದ ಆಹಾರ ಸಂಯೋಜನೆಯಿಂದ ಅಸಹ್ಯಗೊಂಡಿದ್ದು, ಇನ್ನೂ ಕೆಲವರು ದಿಗಿಲುಗೊಂಡಿದ್ದಾರೆ. ಖಾದ್ಯದ ರುಚಿ ಹೇಗಿದೆ ಎಂದು ತಿಳಿಯಲು ಅನೇಕರು ಬಯಸಿದ್ದರು.