ಚೈನಾದಲ್ಲಿ ಕೋವಿಡ್ ಸಾಂಕ್ರಾಮಿಕ ವ್ಯಾಪಕವಾಗಿ ಹರಡುವಿಕೆಯ ಕಾರಣ ಅಲ್ಲಿನ ಸರ್ಕಾರ ದೊಡ್ಡ ನಗರಗಳಲ್ಲಿ ಕಟ್ಟುನಿಟ್ಟಾದ ಲಾಕ್‌ಡೌನ್ ನಿರ್ಬಂಧ ವಿಧಿಸಿದೆ.
ಹೀಗಾಗಿ ಶಾಂಘೈ ನಗರದ ಸುಮಾರು 25 ಮಿಲಿಯನ್ ಜನರು ತಮ್ಮ ಮನೆಗಳಲ್ಲಿಯೇ ಲಾಕ್ ಆಗಿದ್ದಾರೆ. ಅಗತ್ಯ ಆಹಾರ ವಸ್ತು ಪಡೆಯಲು ತೊಂದರೆ ಅನುಭವಿಸುತ್ತಿದ್ದಾರೆ. ಈ ನಡುವೆ ಶಾಂಘೈನಲ್ಲಿ ವ್ಯಕ್ತಿಯೊಬ್ಬ ಡ್ರೋನ್ ಮೂಲಕ ಬಹುಮಹಡಿ ಕಟ್ಟಡದಲ್ಲಿರುವ ತನ್ನ ಮನೆಯ ಕಿಟಕಿಯಿಂದ ನೆಲಮಹಡಿಯ ಕೊಳದಲ್ಲಿರುವ ಮೀನು ಹಿಡಿಯುತ್ತಿರುವುದನ್ನು ತೋರಿಸುವ ವಿಡಿಯೋ ಟ್ವಿಟ್ಟರ್‌ನಲ್ಲಿ ವೈರಲ್ ಆಗುತ್ತಿದೆ.
ಸಹೋದರಿ ಬಗ್ಗೆ ಅಸೂಯೆಪಟ್ಟುಕೊಂಡ ಉದ್ಯಮಿ ಆನಂದ್ ಮಹೀಂದ್ರಾ….! ಕಾರಣವೇನು ಗೊತ್ತಾ….?
ಶಾಂಘೈನಲ್ಲಿ ಅಸೋಸಿಯೇಟ್ ಪ್ರೊಫೆಸರ್ ರೋಡ್ರಿಗೋ ಝೈಡಾನ್ ಅವರು ಈ ವೀಡಿಯೊವನ್ನು ಟ್ವೀಟ್ ಮಾಡಿದ್ದಾರೆ. ಶಾಂಘೈನಲ್ಲಿ ದಿನಸಿ ಶಾಪಿಂಗ್ ಎಂದು ಶೀರ್ಷಿಕೆಯನ್ನು ನೀಡಿದ್ದಾರೆ.
ಡ್ರೋನ್‌ನ ಪ್ರತಿಬಿಂಬವು ಕೊಳದ ಮೇಲ್ಮೈಯಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ದಾರದಿಂದ ಜೋಡಿಸಲಾದ ಬೆಟ್ ಅನ್ನು ಡ್ರೋನ್ ಕೆಳಕ್ಕೆ ಇಳಿಸುತ್ತದೆ. ಬಳಿಕ ಒಂದು ಮೀನು ಅದಕ್ಕೆ ಸಿಲುಕುತ್ತದೆ ಮತ್ತು ಮೇಲಕ್ಕೆ ಎಳೆದು ತರುತ್ತದೆ.
ಈ ವೀಡಿಯೊ ಲಕ್ಷಾಂತರ ವೀಕ್ಷಣೆ ಕಂಡಿದೆ. ಸಾಕಷ್ಟು ಮಂದಿ ಈ ಹೊಸ ಸಾಹಸವನ್ನು ಕೊಂಡಾಡಿದ್ದಾರೆ.
https://youtu.be/QD8d3brp2D4