
ಅಲ್ಲು ಅರ್ಜುನ್‌ರ ’ಪುಷ್ಪ’ ಚಿತ್ರದ ಶ್ರೀವಲ್ಲಿ ಹಾಡಿನ ಹುಕ್ ಸ್ಟೆಪ್ ಯಾವ ಮಟ್ಟಿಗೆ ವೈರಲ್ ಟ್ರೆಂಡ್ ಆಗಿದೆಯೆಂದರೆ, ಈ ಹಾಡಿಗೆ ಸ್ಟೆಪ್ ಹಾಕದೇ ಇರುವವರೇ ಇಲ್ಲ ಎನ್ನುವ ಮಟ್ಟಕ್ಕೆ.
ಚಿತ್ರದಲ್ಲಿ ಅಲ್ಲು ಅರ್ಜುನ್‌ರ ಬೆಂಕಿಯಂಥ ಡೈಲಾಗ್‌ಗಳು ಹಾಗೂ ಹುಕ್ ಸ್ಟೆಪ್‌ಗಳನ್ನು ಅನುಕರಿಸಿ ವಿಡಿಯೋ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಆಪ್ಲೋಡ್ ಮಾಡುವುದು ಭಾರೀ ಟ್ರೆಂಡ್ ಆಗಿಬಿಟ್ಟಿದೆ. ದೇಶಾದ್ಯಂತ ಮಾತ್ರವಲ್ಲದೇ ಜಗತ್ತಿನಾದ್ಯಂತ ಶ್ರೀವಲ್ಲಿ ಫೀವರ್ ಆವರಿಸಿಕೊಂಡಿದೆ.
BIG NEWS: ಇ-ರುಪಿ ಮಿತಿ 10 ಸಾವಿರದಿಂದ 1 ಲಕ್ಷ ರೂ. ಗಳಿಗೆ ಹೆಚ್ಚಳ
ದಕ್ಷಿಣ ಕೊರಿಯಾದ ಮಹಿಳೆಯೊಬ್ಬರು ಶ್ರೀವಲ್ಲಿಯ ಇದೇ ಹುಕ್ ಸ್ಟೆಪ್ ಹಾಕಿದ್ದು, ಅದರ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಕೊರಿಯನ್ ಜಿ1 ಹೆಸರಿನ ಖಾತೆಯೊಂದರ ಮೂಲಕ ಈ ವಿಡಿಯೋ ಪೋಸ್ಟ್ ಮಾಡಲಾಗಿದೆ.
“ನೀವು ಅಂದುಕೊಂಡದ್ದಕ್ಕಿಂತ ಈ ನೃತ್ಯ ಕಷ್ಟವಾಗಿದೆ. ಅಲ್ಲು ಅರ್ಜುನ್ ಕೊರಿಯನ್ ವರ್ಶನ್‌ನಲ್ಲಿ,” ಎಂದು ವಿಡಿಯೋಗೆ ಕ್ಯಾಪ್ಷನ್ ನೀಡಲಾಗಿದೆ.
https://www.youtube.com/watch?v=9lw41eoOdpk&feature=share