ಆಘಾತಕಾರಿ ಘಟನೆಯೊಂದರಲ್ಲಿ, ತೆಲಂಗಾಣದ ವಾರಂಗಲ್‌ನ ಮಹಾತ್ಮ ಗಾಂಧಿ ಸ್ಮಾರಕ (ಎಂಜಿಎಂ) ಆಸ್ಪತ್ರೆಯ ವಾರ್ಡ್‌ನಲ್ಲಿ ರೋಗಿಯ ಹಾಸಿಗೆಯ ಕೆಳಗೆ ಹಾವೊಂದು ಪತ್ತೆಯಾಗಿದೆ.
ಘಟನೆಯ ವಿಡಿಯೋದಲ್ಲಿ ಆಸ್ಪತ್ರೆಯ ವಾರ್ಡ್ ಒಂದರಲ್ಲಿ ರೋಗಿಯೊಬ್ಬರು ಹಾಸಿಗೆಯ ಮೇಲೆ ಮಲಗಿದ್ದಾಗ ಹಾವು ಹಾಸಿಗೆಯ ಕೆಳಗೆ ಹರಿದುಕೊಂಡು ಬರುವುದನ್ನು ನೋಡಬಹುದು.
ಸ್ವಲ್ಪ ಸಮಯದ ನಂತರ ಭಯಭೀತರಾದ ರೋಗಿಗಳು, ಸಿಬ್ಬಂದಿ ಮತ್ತು ಅಟೆಂಡರ್ ಆಸ್ಪತ್ರೆಯ ಆಡಳಿತವನ್ನು ಎಚ್ಚರಿಸಿದ್ದಾರೆ.
ಟ್ವಿಟ್ಟರ್ ಬಳಕೆದಾರರು ಮತ್ತು ಪತ್ರಕರ್ತ ಆಶಿಶ್ ಅವರು ವೀಡಿಯೊವನ್ನು ಟ್ವೀಟ್ ಮಾಡಿ “ಒಂದು ತಿಂಗಳಲ್ಲಿ ಎರಡನೇ ಬಾರಿಗೆ ಈ ರೀತಿ ಹಾವು ಬಂದಿದೆ” ಎಂದು ಬರೆದಿದ್ದಾರೆ.
ಎಂಜಿಎಂ ಆಸ್ಪತ್ರೆಯಲ್ಲಿ ಹಾವು ಪತ್ತೆಯಾಗಿದ್ದು, ಇದು ಎರಡನೇ ಬಾರಿ. ಅಕ್ಟೋಬರ್ 13 ರಂದು ವಾಶ್ ರೂಂನಲ್ಲಿ ನಾಗರಹಾವು ಕಂಡುಬಂದಿದೆ. ಈ ವರ್ಷದ ಮಾರ್ಚ್‌ನಲ್ಲಿ ಐಸಿಯುನಲ್ಲಿದ್ದ ರೋಗಿಯನ್ನು ಇಲಿಗಳು ಕಚ್ಚಿದ್ದರಿಂದ ಆಸ್ಪತ್ರೆ ಸುದ್ದಿಯಾಗಿತ್ತು.
ರೋಗಿ ಶ್ರೀನಿವಾಸ್ ಅವರ ಕೈ ಮತ್ತು ಕಾಲುಗಳಿಗೆ ಇಲಿಗಳು ಕಚ್ಚಿದ್ದು, ರಕ್ತಸ್ರಾವದ ಗಾಯಗಳಾಗಿತ್ತು. ಉಸಿರಾಟ ಮತ್ತು ಕಿಡ್ನಿ ಸಂಬಂಧಿ ಸಮಸ್ಯೆಗಳಿಂದಾಗಿ ಅವರು ನಿಗಾ ಘಟಕದಲ್ಲಿದ್ದರು. ಎರಡು ದಿನಗಳ ಬಳಿಕ ಶ್ರೀನಿವಾಸ್ ಅವರು ತೀವ್ರ ಆರೋಗ್ಯ ಸಮಸ್ಯೆಯಿಂದ ಸಾವನ್ನಪ್ಪಿದ್ದರು.
https://twitter.com/KP_Aashish/status/1584418978620792837?ref_src=twsrc%5Etfw%7Ctwcamp%5Etweetembed%7Ctwterm%5E1584418978620792837%7Ctwgr%5E932f5ca6e0931eb9aa1d134b69b7cefc3141e6e5%7Ctwcon%5Es1_&ref_url=https%3A%2F%2Fwww.india.com%2Fviral%2Fviral-video-snake-found-under-patients-bed-mgm-hospital-telangana-2nd-such-case-in-a-month-5703978%2F