ಲಂಡನ್: ರಿಷಿ ಸುನಕ್ ಅವರು ಬ್ರಿಟನ್ ಪ್ರಧಾನಿ ಹುದ್ದೆ ಏರುತ್ತಲೇ ಹೊಸ ಮನೆಗೆ ಗೃಹ ಪ್ರವೇಶ ಮಾಡಿರುವುದಾಗಿ ಫೋಟೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ರಿಷಿ ಸುನಕ್ ಹಾಗೂ ಅವರ ಪತ್ನಿ ಅಕ್ಷತಾ ಮೂರ್ತಿ ಅವರು ಕೇಸರಿ ಬಣ್ಣದ ಶಾಲು ಧರಿಸಿ ಹಸುವಿನ ಜತೆ ಇರುವ ಫೋಟೋ ಹಾಗೂ ವಿಡಿಯೋ ಇದಾಗಿದೆ.
ಈ ಫೋಟೋ ಮತ್ತು ವಿಡಿಯೋ ಥಹರೇವಾರಿ ಕಮೆಂಟ್ಗಳೊಂದು ವೈರಲ್ ಆಗುತ್ತಿದೆ. ಆದರೆ ಅಸಲಿಯತ್ತು ಏನೆಂದರೆ ಇದು ಅವರ ಗೃಹ ಪ್ರವೇಶದ ವಿಡಿಯೋ ಅಥವಾ ಫೋಟೋ ಅಲ್ಲ.
ಬದಲಿಗೆ ಸುನಕ್ ದಂಪತಿ ಕಳೆದ ಆಗಸ್ಟ್ 18 ರಂದು ವ್ಯಾಟ್‌ಫೋರ್ಡ್‌ನಲ್ಲಿರುವ ಇಸ್ಕಾನ್ ಭಕ್ತಿವೇದಾಂತ ದೇವಸ್ಥಾನಕ್ಕೆ ಭೇಟಿ ನೀಡಿದಾಗ ತೆಗೆದಿರುವ ವಿಡಿಯೋ.
ಈ ಫೋಟೋ ಅನ್ನು ಅಂದು ಸುನಕ್ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದರು. ‘ಜನ್ಮಾಷ್ಟಮಿಯನ್ನು ಆಚರಿಸಲು ಇಂದು ನಾನು ನನ್ನ ಪತ್ನಿ ಅಕ್ಷತಾ ಅವರೊಂದಿಗೆ ಭಕ್ತಿವೇದಾಂತ ದೇವಸ್ಥಾನಕ್ಕೆ ಭೇಟಿ ನೀಡಿದ್ದೇನೆ” ಎಂದು ಅವರು ಶೀರ್ಷಿಕೆಯಲ್ಲಿ ಬರೆದಿದ್ದರು.
ಈ ಸತ್ಯವನ್ನು ದಿ ಕ್ವಿಂಟ್ಸ್ ಎಂಬ ವೆಬ್ಸೈಟ್ ಪ್ರಕಟಿಸಿದೆ. ವೈರಲ್ ಆಗುತ್ತಿರುವ ಫೋಟೋ ಲಂಡನ್ನ ಡೌನಿಂಗ್ ಸ್ಟ್ರೀಟ್ನಲ್ಲಿ ಹೊಸ ಮನೆ ಕಟ್ಟಿದ್ದು, ಅದರ ಗೃಹಪ್ರವೇಶದ್ದು ಅಲ್ಲ ಎಂದು ದಾಖಲೆ ಸಹಿತ ಇದು ತೋರಿಸಿದೆ.