
ಬರ್ತಡೇ ಪಾರ್ಟಿಗೆ ಒಂದೆಡೆ ಸೇರಿಕೊಂಡಿದ್ದ ಯುವತಿಯರ ಗುಂಪೊಂದು ಖುಷಿಯಿಂದ ಕುಣಿಯುತ್ತಿರುವಾಗಲೇ ಭೂಮಿ ಕುಸಿದಿದ್ದು, ಅದರೊಳಗೆ ಬಿದ್ದಿದ್ದಾರೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಘಟನೆ ಬ್ರೆಜಿಲ್ ನ ಈಶಾನ್ಯ ಭಾಗದ ನಗರ ಅಲಗೋಯಿನಾಸ್ ನಲ್ಲಿ ನಡೆದಿದ್ದು, ವಿಡಿಯೋದಲ್ಲಿ ಕಾಣುವಂತೆ ಏಳು ಜನ ಯುವತಿಯರು ಗುಂಪಾಗಿ ನಿಂತು ಕುಣಿಯಲು ಆರಂಭಿಸಿದ್ದಾರೆ. ಅವರ ಉತ್ಸಾಹ ಜೋರಾದಂತೆ ಕುಣಿತದ ಅಬ್ಬರವೂ ಜಾಸ್ತಿಯಾಗಿದೆ.
ಆಗ ಇದ್ದಕ್ಕಿದ್ದಂತೆ ಭೂಮಿ ಬಾಯಿ ತೆರೆದಿದ್ದು ಕುಣಿಯುತ್ತಿದ್ದ ಯುವತಿಯರು ಅದರೊಳಗೆ ಬಿದ್ದಿದ್ದಾರೆ. ಅದೃಷ್ಟವಶಾತ್ ಎಲ್ಲರೂ ಸಣ್ಣಪುಟ್ಟ ತರಚು ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಇದರ ವಿಡಿಯೋ ಈಗ ಫುಲ್ ವೈರಲ್ ಆಗಿದ್ದು, ಯುವತಿಯರ ತೂಕವನ್ನು ತಡೆದುಕೊಳ್ಳಲು ಅಲ್ಲಿನ ಭೂಮಿಗೆ ಆಗಿಲ್ಲ ಎಂದು ತಮಾಷೆಯ ಕಾಮೆಂಟ್ಗಳನ್ನು ಕೆಲವರು ಹಾಕಿದ್ದಾರೆ.