ಪೆಟ್ರೋಲ್ ಪಂಪ್ ದರೋಡೆ ಮಾಡಲು ಬಂದ ದರೋಡೆಕೋರರ ಪೈಕಿ ಒಬ್ಬನನ್ನು ಸೆಕ್ಯುರಿಟಿ ಗಾರ್ಡ್ ಗುಂಡು ಹೊಡೆದು ಕೊಂದು ಹಾಕಿರುವ ವಿಡಿಯೋ ವೈರಲ್ ಆಗಿದೆ.
ಇತ್ತಿಚೆಗೆ ಪಂಜಾಬ್ನ ಅನೇಕ ಪ್ರದೇಶಗಳಲ್ಲಿ ನಿತ್ಯ ಕೊಲೆ, ಸುಲಿಗೆ, ದರೋಡೆ, ಪ್ರಕರಣಗಳು ಪ್ರತಿನಿತ್ಯ ಬೆಳಕಿಗೆ ಬರುತ್ತಿದೆ. ಇತ್ತಿಚೆಗೆ ಅಮೃತಸರದ ಮಾಲಿಯಾ ಹಳ್ಳಿ ಹತ್ತಿರ ಈ ಘಟನೆ ನಡೆದಿದ್ದು, ಈ ಕುರಿತು ಪೊಲೀಸರು ಈಗಾಗಲೇ ತನಿಖೆಯನ್ನ ಕೈಗೊಂಡಿದ್ದಾರೆ.
ಮುಖಕ್ಕೆ ಮಾಸ್ಕ್ ಹಾಕಿಕೊಂಡ ಇಬ್ಬರು ದರೋಡೆಕೋರರು ಬೈಕಿನಲ್ಲಿ ಬಂದು ದರೋಡೆಗೆ ಮುಂದಾಗುತ್ತಾರೆ. ಆಗ ಸೆಕ್ಯುರಿಟಿ ಗಾರ್ಡ್ ಒಬ್ಬರು, ಇಬ್ಬರ ದರೋಡೆಕೋರರ ಪೈಕಿ ಒಬ್ಬನಿಗೆ ಗುಂಡು ಹಾರಿಸುತ್ತಾನೆ. ಅಲ್ಲಿ ಅಪಾಯ ಅನ್ನೊದು ಗೊತ್ತಾಗಿದ್ದೇ ತಡ ಇನ್ನೊಬ್ಬ ದರೋಡೆಕೋರ ಸ್ಥಳದಿಂದ ಪರಾರಿಯಾಗಿ ಬಿಡುತ್ತಾನೆ. ಈ ಘಟನೆಯಲ್ಲಿ ಓರ್ವ ದರೋಡೆಕೋರ ಮೃತಪಟ್ಟಿದ್ದಾನೆ. ಈ ಎಲ್ಲ ದೃಶ್ಯಗಳು ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿವೆ.
ಅಮೃತಸರದ ಮಾಲಿಯಾ ಹಳ್ಳಿಯಲ್ಲಿರುವ ಪೆಟ್ರೋಲ್ಬಂಕ್ ದರೋಡೆ ಘಟನೆ ನಡೆದಿದ್ದು. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆಯನ್ನ ಆರಂಭಿಸಿದ್ದಾರೆ. ಪಂಜಾಬ್ನಲ್ಲಿ ಆಪ್ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆಯೇ ಕಾನೂನು ವ್ಯವಸ್ಥೆ ಹಾಳಾಗಿದೆ. ಇದರ ಪರಿಣಾಮವೇ ಈ ರೀತಿಯ ಘಟನೆಗಳು ಎಂದು ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಕಿಡಿಕಾರುತ್ತಿದ್ದಾರೆ.