ಗುಡ್ಡಗಾಡು ಪ್ರದೇಶದಲ್ಲಿ ಕಾಣಿಸುವ ಮೇಕೆ ಹಾಗೂ ಹದ್ದಿನ ಕಾದಾಟದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹದ್ದು, ಮೇಕೆಯನ್ನು ಬೇಟೆಯಾಡುವಂತೆ ಕಾಣುತ್ತದೆ. ಕಷ್ಟಕರವಾದ ಭೂಪ್ರದೇಶವನ್ನು ಹತ್ತುತ್ತಿದ್ದ ಮೇಕೆಯನ್ನು ಹದ್ದು ಕೆಳಕ್ಕೆ ಹಾರಿಬಂದಾಗ ಬೆರಗುಗೊಳಿಸುವಂತಿದೆ.
ಹದ್ದು- ಮೇಕೆ ಹೋರಾಟ ಅಂದುಕೊಂಡಷ್ಟು ಸಾಮಾನ್ಯವಾಗಿ ಕಾಣಿಸುತ್ತಿಲ್ಲ. ಹದ್ದಿನ ಬಿಗಿ ಹಿಡಿತದಿಂದ ತಪ್ಪಿಕೊಳ್ಳಲು ಮೇಕೆ ಇನ್ನಿಲ್ಲದ ಪ್ರಯತ್ನ ಮಾಡುತ್ತದೆ. ಇದನ್ನು ನೋಡುತ್ತಿದ್ದ ಮೇಕೆಗಳ ಪೈಕಿ ಒಂದು ಮಾತ್ರ ನೆರವಿಗೆ ಧಾವಿಸಿ ಬಂದು ಹದ್ದಿನ ಪಟ್ಟು ತಪ್ಪಿಸಲು ಪ್ರಯತ್ನಿಸುವುದೂ ಸಹ ಕಾಣಿಸುತ್ತದೆ.
ಒಂದು ಹಂತದಲ್ಲಿ ಹದ್ದಿನ ಹಿಡಿತದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುವುದೇ ಇಲ್ಲ ಎಂಬ ಸ್ಥಿತಿಗೆ ಬಂದ ಮೇಕೆ ಗುಡ್ಡದಿಂದ ಕೆಳಕ್ಕೆ ಜಿಗಿಯುತ್ತದೆ, ಪಲ್ಟಿ ಪಡೆಯುತ್ತದೆ, ಕಲ್ಲಿಗೆ ಡಿಕ್ಕಿ ಹೊಡೆಯುತ್ತದೆ. ಆದರೂ ಪಟ್ಟು ಸಡಿಲ ಆಗುವುದೇ ಇಲ್ಲ. ಆದರೆ, ಕೊನೆ ಕ್ಷಣದಲ್ಲಿ ಹದ್ದು ಸೋಲೊಪ್ಪಿಕೊಳ್ಳಲೇ ಬೇಕಾಗುತ್ತದೆ. ಮೇಕೆ ಪಲ್ಟಿ ಹೊಡೆದ ಸಂದರ್ಭದಲ್ಲಿ ಹದ್ದಿಗೆ ಒಂದಷ್ಟು ಜಖಂ ಆಗುವ ಕಾರಣ ಹದ್ದು ನೆಲಕ್ಕುರುಳುತ್ತದೆ. ಈ ರಣ ರೋಚಕ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಆಶ್ಚರ್ಯ ಭರಿತರಾಗಿ ವೀಕ್ಷಿಸಿ ಕಾಮೆಂಟ್ ಮಾಡಿದ್ದಾರೆ.
ಹದ್ದುಗಳು ಸಾಮಾನ್ಯವಾಗಿ ತುಂಬಾ ಎತ್ತರದಲ್ಲಿ ಹಾರುತ್ತವೆ ಮತ್ತು ಮೈಲುಗಳವರೆಗೆ ಕ್ರಮಿಸುವ ಸಾಮರ್ಥ್ಯ ಹೊಂದಿರುತ್ತವೆ. ಮತ್ತು ಪ್ರತಿ ಚದರ ಇಂಚಿಗೆ ಸುಮಾರು 750 ಪೌಂಡ್ಗಳ ಹಿಡಿತದ ಬಲವು (ಸಿಂಹದ ದವಡೆಗಳಿಗಿಂತ ಬಲವಾಗಿರುತ್ತದೆ) ಅದರ ವಿಶೇಷ ಸಾಮರ್ಥ್ಯ. 3.5 ಅಡಿ ಉದ್ದದ ಪಕ್ಷಿಗಳು ಎಂಟು ಅಡಿಗಳವರೆಗೆ ರೆಕ್ಕೆಗಳನ್ನು ಹೊಂದಿರುವುದುಂಟು.