
ಈ ಘಟನೆ ನಡೆದ ಸ್ಥಳ ಮತ್ತು ಸಮಯ ತಿಳಿದು ಬಂದಿಲ್ಲ. ಆದರೆ ಯುವಕನ ಕೃತ್ಯ ಆನ್‌ಲೈನ್‌ನಲ್ಲಿ ವ್ಯಾಪಕ ಆಕ್ರೋಶವನ್ನು ಹುಟ್ಟುಹಾಕಿದೆ. ಅನೇಕ ಬಳಕೆದಾರರು ಆತನ ಬಂಧನಕ್ಕೆ ಆಗ್ರಹಿಸಿದ್ದಾರೆ. ಆತನಿಗೆ ಅತ್ಯಂತ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದರೆ ಇತರರು ಈತನಿಗೆ ಮರಣದಂಡನೆ ನೀಡಬೇಕೆಂದು ಹೇಳಿದ್ದಾರೆ.
ವೈರಲ್ ವಿಡಿಯೋಗೆ ಪ್ರತಿಕ್ರಿಯಿಸಿರುವ ಓರ್ವ ಎಕ್ಸ್ ಬಳಕೆದಾರರು , ಆ ವ್ಯಕ್ತಿ, ಒಡೆದ ಕಿಟಕಿಯನ್ನು ಬದಲಿಸುವ ಗುತ್ತಿಗೆದಾರ ಎಂದು ಹೇಳಿದ್ದಾರೆ. ರೈಲು ಪ್ಲಾಟ್‌ಫಾರ್ಮ್‌ನಲ್ಲಲ್ಲ, ಸೇವಾ ಕೇಂದ್ರದಲ್ಲಿದೆ. ಅವರು ಗಾಜಿನ ಕಿಟಕಿಯನ್ನು ಬದಲಿಸಲು ನಿಯೋಜಿಸಲಾದ ಕೆಲಸಗಾರರಾಗಿದ್ದಾರೆ ಎಂದು ತಿಳಿಸಿದ್ದಾರೆ.
ವೀಡಿಯೊದ ಅಸಲಿ ವಿವರಗಳನ್ನು ಅಧಿಕಾರಿಗಳು ಇನ್ನೂ ಖಚಿತಪಡಿಸಿಲ್ಲ, ಆದರೆ ಈ ಘಟನೆಯು ಸಾರ್ವಜನಿಕ ಆಸ್ತಿಯ ಸುರಕ್ಷತೆಯ ಹೊಣೆಗಾರಿಕೆಯ ಬಗ್ಗೆ ಕಳವಳವನ್ನು ಉಂಟುಮಾಡಿದೆ.