ಹಾವುಗಳು ನೋಡಿ ಜನ ಉತ್ಸುಕವಾಗಲ್ಲ, ಅಂತಹ ವರ್ಗಕ್ಕೆ ಸೇರಿದ ಪ್ರಾಣಿಯದು. ಇಲ್ಲೊಂದು ಪುಟ್ಟ ಬಾಲಕಿ ಹೆಬ್ಬಾವಿನೊಂದಿಗೆ ಸಲೀಸಾಗಿ ಆಟವಾಡುವ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ಗಾಬರಿ ಪಟ್ಟಿದ್ದಾರೆ.
ಪುಟ್ಟ ಬಾಲಕಿ ಹೆಸರು ಅರಿಯಾನ. ಆಕೆಗೆ ಹಾವೆಂದರೆ ಬಲು ಪ್ರೀತಿ. ಪ್ರೀತಿ ಇದ್ದಮೆಲೆ ಹೆದರಿಕೆ ಇನ್ನೆಲ್ಲಿ ಎಂಬಂತೆ ಹಾವನ್ನು ಸಲೀಸಾಗಿ ಎಳೆದಾಡುವುದು ವಿಡಿಯೋದಲ್ಲಿ ಕಾಣಿಸುತ್ತದೆ.
ಆಕೆ ಹಾವನ್ನು ಮುದ್ದಿಸುವ ಮತ್ತು ಆಡುವ ಅನೇಕ ವಿಡಿಯೊಗಳಿವೆ. ಈ ಕ್ಲಿಪ್ನಲ್ಲಿ ಹೆಬ್ಬಾವು ಹಾಸಿಗೆಯಲ್ಲಿ ಅಡಗಿಕೊಳ್ಳಲು ಹೊರಡುವಾಗ ಆಕೆ ಅದರ ಬಾಲ ಎಳೆಯುವುದನ್ನು ಕಾಣಬಹುದು.
ವಿಡಿಯೊವನ್ನು ಸಾವಿರಾರು ಮಂದಿ ವೀಕ್ಷಿಸಿದ್ದು ಗಾಬರಿಯ ಪ್ರತಿಕ್ರಿಯೆ ನೀಡಿದ್ದಾರೆ. ಹಾವುಗಳು ಆಟವಾಡುವ ಆಟಿಕೆಗಳಲ್ಲ ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಇಂತಹ ಸರೀಸೃಪಗಳನ್ನು ಮನೆಯಲ್ಲಿ ಇಡಬೇಡಿ ಎಂದು ಅರಿಯಾನಾಗೆ ಮನವಿ ಮಾಡಿದ್ದಾರೆ.