
ಭಾರೀ ಮೌಲ್ಯದ ಪದಾರ್ಥಗಳನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಪೊಲೀಸರ ಕಣ್ತಪ್ಪಿಸಿ ಸಾಗಿಸುವ ಡ್ರಗ್ ರ‍್ಯಾಕೆಟ್‌ಗಳು ಸಾರಿಗೆ ಜಾಲಗಳ ಮೂಲಕ ಹಾದು ಹೋಗುವ ವೇಳೆ ಡ್ರಗ್ ಗಳನ್ನು ಕದ್ದು ಸಾಗಿಸಲು ಥರಾವರಿ ಪ್ಲಾನ್ ಮಾಡುತ್ತಾರೆ.
ಈ ಸೀಸನ್ ನಲ್ಲಿ ಮಾವು ತಿಂದಿರಾ…? ಹಾಗಾದ್ರೆ ಇದನ್ನೋದಿ
ಇಂಥದ್ದೇ ಪ್ಲಾನ್ ಒಂದನ್ನು ರೆಡ್ಡಿಟ್‌ನಲ್ಲಿ ಶೇರ್ ಮಾಡಲಾಗಿದೆ. ಅಧಿಕಾರಿಯೊಬ್ಬರು ಕಲ್ಲಂಗಡಿ ಹಣ್ಣಿನೊಳಗೆ ಇಟ್ಟಿದ್ದ ಮಾದಕ ದ್ರವ್ಯವನ್ನು ಕಟ್ ಮಾಡಿ ಹೊರತೆಗೆಯುವ ವಿಡಿಯೋವನ್ನು ನೋಡಬಹುದಾಗಿದೆ.
ಕಲ್ಲಂಗಡಿ ಹಣ್ಣಿನ ಒಳಗೆ ತಿರುಳನ್ನು ತೆಗೆದು ಪ್ಲಾಸ್ಟಿಕ್ ಬ್ಯಾಗ್ ಒಳಗೆ ದೊಡ್ಡ ಮಟ್ಟದಲ್ಲಿ ಮಾರಿಯಾನಾ ಬಚ್ಚಿಟ್ಟಿರುವ ಈ ವಿಡಿಯೋದಲ್ಲಿ ಇಂಥದ್ದೇ ಇನ್ನಷ್ಟು ಕಲ್ಲಂಗಡಿ ಹಣ್ಣುಗಳಿರುವ ಟ್ರಕ್ ಒಂದನ್ನು ಅಧಿಕಾರಿಗಳು ವಶಕ್ಕೆ ಪಡೆಯುತ್ತಿರುವುದನ್ನು ನೋಡಬಹುದಾಗಿದೆ.