
ಒಲಿಂಪಿಕ್ಸ್, ಕಾಮನ್‌ವೆಲ್ತ್ ಗೇಮ್ಸ್ ಮತ್ತು ಏಷ್ಯನ್ ಗೇಮ್‌ಗಳಂತಹ ಮೆಗಾ ಕ್ರೀಡಾಕೂಟಗಳ ಸಮಯದಲ್ಲಿ ಜಿಮ್ನಾಸ್ಟಿಕ್ಸ್ ವಿಭಾಗದಿಂದ ಉತ್ತಮ ದೈಹಿಕ ವ್ಯಾಯಾಮಗಳನ್ನು ನಾವು ನೋಡುತ್ತೇವೆ. ಇಂಥ ಕ್ರೀಡಾಪಟುಗಳ ಸಾಧನೆಗೆ ಹ್ಯಾಟ್ಸ್ಆಫ್ ಎನ್ನುತ್ತೇವೆ.
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ಒಂದು ವೀಡಿಯೊ ಹುಡುಗಿಯೊಬ್ಬಳು ಸ್ಕಿಪ್ಪಿಂಗ್ ಮಾಡುವುದನ್ನು ನೋಡಬಹುದು. ಹಿನ್ನೆಲೆ ಸಂಗೀತಕ್ಕೆ ಯುವತಿ ಅಬ್ಬಬ್ಬಾ ಎನ್ನುವಷ್ಟು ರೋಚಕವಾಗಿ ಸ್ಕಿಪ್ಪಿಂಗ್ ಮಾಡುತ್ತಾಳೆ. ನಂಬಲಾಗದ ಶಕ್ತಿ, ಸಮತೋಲನ, ನಮ್ಯತೆ, ಚುರುಕುತನ, ಸಮನ್ವಯತೆ ಮತ್ತು ಸಮರ್ಪಣೆಯನ್ನು ನಾವು ನೋಡಬಹುದಾಗಿದೆ. ಅವಳು ಸುಲಭವಾಗಿ ಹಗ್ಗವನ್ನು ತಿರುಗಿಸಿ ತಿರುಗಿಸಿ ಎಲ್ಲಿಯೂ ಸ್ಕಿಪ್ ಆಗುವುದೇ ಇಲ್ಲ.
ಆದರೆ ಈ ವಿಡಿಯೋ ನೋಡುವವರ ತಲೆ ತಿರುಗುವುದು ಗ್ಯಾರೆಂಟಿ. ಈ ವಿಶಿಷ್ಟ ಪ್ರತಿಭೆಗೆ ನೆಟ್ಟಿಗರು ಮಂತ್ರಮುಗ್ಧರಾಗಿದ್ದಾರೆ. ಈ ಅಸಾಧಾರಣ ಪ್ರತಿಭೆಯನ್ನು ಕಂಡು ನೆಬ್ಬೆರಗಾಗಿದ್ದಾರೆ.
https://twitter.com/NextSkillslevel/status/1618934972756426754?ref_src=twsrc%5Etfw%7Ctwcamp%5Etweetembed%7Ctwterm%5E1618934972756426754%7Ctwgr%5E4cc54fe7fb55b89d72d863044f2f60abc607daa2%7Ctwcon%5Es1_&ref_url=https%3A%2F%2Fwww.india.com%2Fviral%2Fviral-video-shows-girls-superhuman-skills-with-skipping-rope-watch-here-5877416%2F