ಇತ್ತೀಚೆಗೆ ಜಿಎಸ್ಟಿ ಹೆಚ್ಚು ಪ್ರಚಲಿತದಲ್ಲಿರುವ ವಿಷಯ. ಇಲ್ಲೆರೆಡು ಆನೆಗಳು ರಸ್ತೆಯಲ್ಲಿ ಸಾಗುತ್ತಿದ್ದ ಲಾರಿ ಅಡ್ಡಗಟ್ಟಿ ವಸೂಲಿಗಿಳಿದಿದ್ದು, ಈ ಘಟನೆಯ ವಿಡಿಯೋ ವೈರಲ್ ಆಗಿದೆ. ಇದು ಯಾವ ರೂಪದ ತೆರಿಗೆ ಇರಬಹುದು ಎಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯೂ ಆಗುತ್ತಿದೆ.
ಮಾನವ ಪ್ರಾಣಿ ಸಂಘರ್ಷ ನಡೆಯುತ್ತಲೇ ಇದ್ದು, ಇದೂ ಸಹ ಅಂತಹದ್ದೇ ಘಟನೆ. ಕಾಡಿನ ಆನೆಗಳು ರಸ್ತೆಗೆ ಬಂದು ಕಬ್ಬು ಸಾಗಣೆ ಲಾರಿಯನ್ನು ಅಡ್ಡಗಟ್ಟಿದ್ದು, ಲಾರಿಯ ಕ್ಲೀನರ್ ಕೆಲವು ಕಬ್ಬಿನ ಕೋಲುಗಳ ಕೆಳಕ್ಕೆ ಹಾಕಿದ ನಂತರ ಆನೆಗಳು ಅತ್ತ ಹೆಜ್ಜೆ ಹಾಕಿ ಲಾರಿ ಸಾಗಲು ಅನುಕೂಲ ಮಾಡಿಕೊಡುತ್ತದೆ.
ಆನೆಗಳಿಗೆ ಇಷ್ಟವಾದ ಆಹಾರಗಳಲ್ಲಿ ಕಬ್ಬು ಸಹ ಒಂದು. ಈ ಪ್ರಸಂಗದಲ್ಲಿ ತನ್ನಿಷ್ಟದ ಕಬ್ಬಿನ ರಾಶಿ ಕಂಡ ಆನೆಗಳು, ರಸ್ತೆಯಲ್ಲಿ ಅಡ್ಡಗಟ್ಟಿ ಪಡೆದುಕೊಂಡಿದ್ದು ನೆಟ್ಟಿಗರನ್ನೂ ಸಹ ಖುಷಿಪಡಿಸಿದೆ.
ಐಎಫ್ಎಸ್ ಅಧಿಕಾರಿ ಪರ್ವೀನ್ ಕಾಸ್ವಾಸ್ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ವಿಡಿಯೋ ಲಕ್ಷಾಂತರ ವೀಕ್ಷಣೆ ಕಂಡಿದೆ. ಅವರು ವಿಡಿಯೋ ಜೊತೆಗೆ ಇದು ಯಾವ ರೀತಿಯ ತೆರಿಗೆ ಎಂದು ಪ್ರಶ್ನೆರೂಪದ ಶೀರ್ಷಿಕೆಯನ್ನು ಹಾಕಿದ್ದಾರೆ. ಹೀಗಾಗಿ ನೆಟ್ಟಿಗರಿಗೆ ಇದು ಚರ್ಚೆಗೂ ಅವಕಾಶ ಮಾಡಿಕೊಟ್ಟಂತಾಗಿದೆ.