
ಇತ್ತೀಚೆಗಷ್ಟೇ ನೂರಾರು ಮಂದಿ ಇದ್ದ ಗುಂಪು ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಆಗಿರುವ ಯುವತಿಗೆ ಲೈಂಗಿಕ ಕಿರುಕುಳ ನೀಡಿದ್ದು, ಅಸಹಾಯಕಳಾಗಿದ್ದ ಆಕೆಯ ವಿಡಿಯೋ ವೈರಲ್ ಆಗಿತ್ತು. ಇದೀಗ ಮತ್ತೊಂದು ಅಂತಹುದೇ ಘಟನೆ ನಡೆದಿದ್ದು ಯುವಕನ ಜೊತೆ ಯುವತಿಯೊಬ್ಬಳು ಹೋಗುತ್ತಿದ್ದಾಗ ಆಕೆಯನ್ನು ಹಿಂಬಾಲಿಸಿ ಕಿರುಕುಳ ನೀಡಲಾಗಿದೆ.
ಪಾಕಿಸ್ತಾನದ ಇಸ್ಲಾಮಾಬಾದ್ ನಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದ್ದು ಪ್ಯಾಂಟ್ – ಟಿ ಶರ್ಟ್ ಧರಿಸಿದ್ದ ಯುವತಿ, ಯುವಕನ ಜೊತೆ ನಡೆದು ಹೋಗುತ್ತಿರುತ್ತಾಳೆ. ಆಗ ಚಿಕ್ಕವರಿಂದ ಹಿಡಿದು ದೊಡ್ಡವರವರೆಗೆ ಇದ್ದ ಪುರುಷರ ಗುಂಪು ಆಕೆಯನ್ನು ಹಿಂಬಾಲಿಸಿ ಕಿರುಕುಳ ನೀಡಲು ಆರಂಭಿಸಿದೆ. ಆಕೆ ಪ್ರತಿರೋಧ ತೋರಲು ಯತ್ನಿಸಿದ್ದು, ಜೊತೆಗಿದ್ದ ಯುವಕ ಗೆಳತಿಗೆ ಕಿರುಕುಳ ನೀಡದಂತೆ ಬೇಡಿಕೊಂಡರೂ ಕೃತ್ಯ ಮುಂದುವರಿಸಿದ್ದಾರೆ. ಆಘಾತಕಾರಿ ಸಂಗತಿ ಎಂದರೆ ಯುವತಿಗೆ ಕಿರುಕುಳ ನೀಡುತ್ತಿದ್ದ ಗುಂಪಿನಲ್ಲಿ ಇದ್ದ ಯುವಕನೊಬ್ಬ ಈ ಹಿಂದೆ ತೃತೀಯ ಲಿಂಗಿಗೆ ಇದೇ ರೀತಿ ಮಾಡಿದ್ದ ಎನ್ನಲಾಗಿದ್ದು, ಆ ವಿಡಿಯೋವನ್ನು ಸಹ ಶೇರ್ ಮಾಡಲಾಗಿದೆ.