ದೈತ್ಯಾಕಾರದ ಕೋಳಿಯೊಂದರ ವಿಡಿಯೋ ವೈರಲ್ ಆಗಿದ್ದು, ಇದನ್ನು ಕಂಡು ನೆಟ್ಟಿಗರು ಹೌಹಾರಿದ್ದಾರೆ. ಈ ವಿಡಿಯೋ ಹಳೆಯದಾಗಿದ್ದರೂ, ಇನ್ಸ್ಟಾ ಗ್ರಾಂನಲ್ಲಿ ಅದು ಪುನಃ ಮುನ್ನೆಲೆಗೆ ಬಂದಿದ್ದು, ವೈರಲ್ ಆಗುತ್ತಿದೆ.
ರೀಲ್ನಲ್ಲಿ ಮೂರು ಅಡಿ ಎತ್ತರದ ಅಗಾಧವಾದ ಬ್ರಹ್ಮ ಕೋಳಿ ಗೂಡಿನಿಂದ ಹೊರಬಂದು ಸುತ್ತಲೂ ಅಡ್ಡಾಡುತ್ತಿರುವುದನ್ನು ಕಾಣಬಹುದು. ಗೂಡಿನಿಂದ ಹೊರ ಬರುವ ಮುನ್ನ ಕೋಳಿಯು ಮಾಮೂಲಿಯಂತೆ ಕಾಣುತ್ತದೆಯಾದರೂ, ಅದು ಹೊರಬಂದ ನಂತರ ಅದರ ಆಕಾರ, ನಡಿಗೆ ನೋಡಿ ವೀಕ್ಷಕರು ಗಾಬರಿಗೊಳ್ಳುವುದು ಖಚಿತ.
ಅದು ಹೊರಬಂದ ಬಳಿಕ ರೆಕ್ಕೆಗಳನ್ನು ಬೀಸಿಕೊಂಡು ಕ್ಯಾಮೆರಾದ ಮುಂದೆ ಎತ್ತರವಾಗಿ ನಿಂತಾಗ ದೈತ್ಯಾಕಾರದಲ್ಲಿ ಕಾಣಿಸುತ್ತದೆ. ಇದು ಕೊಸೊಮೊದಲ್ಲಿನ ಜಮೀನಿನಲ್ಲಿ ವಾಸಿಸುತ್ತದೆ ಮತ್ತು 7.7 ಕೆಜಿ ತೂಗುತ್ತದೆ.
ಅನೈತಿಕ ಸಂಬಂಧ ಹೊಂದಿದ್ದ ಪತ್ನಿಗೆ ಪತಿಯನ್ನ ಹೆಗಲ ಮೇಲೆ ಹೊರುವ ಶಿಕ್ಷೆ
ಬ್ರಹ್ಮ ಕೋಳಿಗಳು ಕೋಳಿಗಳ ದೊಡ್ಡ ತಳಿಗಳಾಗಿವೆ, ಇವುಗಳನ್ನು ಯುನೈಟೆಡ್ ಸ್ಟೇಟ್ಸ್ನಲ್ಲಿ ಆಮದು ಮಾಡಿಕೊಂಡು ಅಭಿವೃದ್ಧಿಪಡಿಸಲಾಗುತ್ತದೆ. ಬ್ರಹ್ಮ ಕೋಳಿ ತಳಿಯು ಸರಾಸರಿ ತೂಕ ಕೇವಲ 5.5 ಕೆಜಿ ವರೆಗೂ ತಲುಪುತ್ತದೆ. ಈ ಕೋಳಿ ಸರಾಸರಿ ತೂಕಕ್ಕಿಂತ ಎರಡು ಕೆಜಿ ಹೆಚ್ಚೇ ಇದೆ.
ಕೆಲವು ವೀಕ್ಷಕರು ಇದು ನಂಬಲು ಅಸಾಧ್ಯ ಎಂದರು. ವಿಡಿಯೊವೇ ಸುಳ್ಳು ಅಥವಾ ಇದು ಕೋಳಿಯ ಸೂಟ್ ಧರಿಸಿರುವ ವ್ಯಕ್ತಿ ಎಂದು ಅಭಿಪ್ರಾಯ ನೀಡಿದರು. ಆದರೆ ವಿಡಿಯೊ ನಕಲಿ ಅಲ್ಲ. ಆದರೆ ಖಚಿತವಾಗಿ ನಂಬಲಾಗದು. ಇದು ಕೋಳಿ ಅಲ್ಲ, ಡೈನೋಸಾರ್ ಅಥವಾ ಡೆಮೊಗೊರ್ಗಾನ್ ಎಂದು ಮತ್ತೆ ಕೆಲವರು ಪ್ರತಿಕ್ರಿಯೆ ನೀಡಿದ್ದಾರೆ.