
ಥೈಲ್ಯಾಂಡ್ ಪ್ರವಾಸೋದ್ಯಮದ ವೆಬ್‌ಸೈಟ್ ಪ್ರಕಾರ ಮಾರುಕಟ್ಟೆಯು 100 ಮೀಟರ್ ವಿಸ್ತಾರದಲ್ಲಿ ಹರಡಿಕೊಂಡಿದೆ. ಬೆಳಿಗ್ಗೆ 6 ರಿಂದ ಸಂಜೆ 6 ರವರೆಗೆ ತೆರೆದಿರುತ್ತದೆ. ಇದು ಸಮುದ್ರಾಹಾರ, ತರಕಾರಿ, ಹಣ್ಣುಗಳು, ತಾಜಾ ಮತ್ತು ಒಣಗಿದ ಆಹಾರ, ಮಾಂಸ ಮತ್ತು ಇತರ ವಿವಿಧ ಆಹಾರ ಪದಾರ್ಥಗಳನ್ನು ಮಾರಾಟ ಮಾಡುವ ಸಾಮಾನ್ಯ ತಾಜಾ ಮಾರುಕಟ್ಟೆಯಾಗಿದೆ. ಮಾರುಕಟ್ಟೆಯನ್ನು ‘ಜೀವ-ಅಪಾಯಕಾರಿ’ ಮಾರುಕಟ್ಟೆ ಎಂದು ಕರೆಯಲಾಗುತ್ತದೆ.
ಏಕೆಂದರೆ ಅದರ ಮಳಿಗೆಗಳು ಮೇ ಕ್ಲೋಂಗ್-ಬಾನ್ ಲೇಮ್ ರೈಲ್ವೆ ಹಳಿ ಪಕ್ಕದಲ್ಲೇ ಇದೆ. ಇದು ಮಹಾಚಾಯ್ ಮತ್ತು ಮೇ ಕ್ಲೋಂಗ್‌ಗೆ ಚಲಿಸುವ ಸಣ್ಣ ರೈಲು ಮಾರ್ಗವಾಗಿದೆ.