ಮುಂಗಾರು ಮಳೆಯ ಆಗಮನ ಆಗಿದ್ದಾಗಿದೆ. ಆಗಲೇ ಸುರಿಯುತ್ತಿರೋ ಧಾರಾಕಾರ ಮಳೆಯಿಂದ ಸೃಷ್ಟಿಯಾಗುತ್ತಿರುವ ಅವಾಂತರ ಅಷ್ಟಿಷ್ಟಲ್ಲ. ಅದರಲ್ಲೂ ಚೀನಾ ಪ್ರತಿವರ್ಷದಂತೆ ಈ ವರ್ಷವೂ ವರುಣನ ಪ್ರಹಾರಕ್ಕೆ ತತ್ತರಿಸಿ ಹೋಗಿದೆ. ಈಗ ಸುರಿಯುತ್ತಿರುವ ಮಳೆಗೆ ಅರ್ಧಕ್ಕರ್ಧ ಚೀನಾ ಜಲಸಮಾಧಿಯೇ ಆಗಿ ಹೋಗಿದೆ.
ಮಳೆಗಾಲದ ಆರಂಭವೇ ಇಷ್ಟು ಭಯಾನಕವಾಗಿರುವಾಗ ಇನ್ನೂ ಮುಂದಿನ ದಿನಗಳು ಹೇಗಿರಲಿದೆ ಅನ್ನೋ ಆತಂಕ ಚೀನಿಯರಿಗೆ ಕಾಡ್ತಿದೆ. ಈಗಾಗಲೇ ಚೀನಾ ದಕ್ಷಿಣ ಪ್ರಾಂತ್ಯದಲ್ಲಿರುವ ಹುನಾನ ಪ್ರದೇಶದಲ್ಲಿರುವ ನೀರಿನ ಮಟ್ಟ ಒಂದೇ ಸಮನೆ ಹೆಚ್ಚಾಗುತ್ತಿದ್ದು, ಈಗಾಗಲೇ ಅಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.
ಇನ್ನೂ ಯೋಂಗ್ಝೋಡ್ ನಗರದಲ್ಲಿ ಅನೇಕ ಮನೆಗಳು ಮಳೆಯ ನೀರಿಗೆ ಕೊಚ್ಚಿಕೊಂಡು ಹೋಗಿದೆ. ಅದರಲ್ಲೂ ಒಂದು ವಿಶಾಲಕಾಯದ ಮನೆ ನೀರಿನಲ್ಲಿ ಕೊಚ್ಚಿಕೊಂಡು ಹೋಗುವ ದೃಶ್ಯ ಕ್ಯಾಮರಾದಲ್ಲಿ ರೆಕಾರ್ಡ್ ಆಗಿದೆ. ಈ ಮನೆ ಬೀಳುತ್ತಿರುವ ದೃಶ್ಯ ಎಂಥವರವನ್ನೂ ಕೂಡಾ ಬೆಚ್ಚಿಬೀಳಿಸೋ ಹಾಗಿದೆ. ಸದ್ಯಕ್ಕೆ ಮನೆಯಲ್ಲಿ ಯಾರೂ ಇಲ್ಲದ ಕಾರಣ ಯಾರಿಗೂ ಪ್ರಾಣಾಪಾಯವಾಗಿಲ್ಲ.
ಅನೇಕ ಮನೆಗಳ ಪರಿಸ್ಥಿತಿಯೂ ಇದೇ ಆಗಿದ್ದು, ಚೀನಾ ಸರ್ಕಾರ ಈಗಾಗಲೇ ಅನೇಕ ಕ್ರಮಗಳನ್ನ ಕೈಗೊಂಡಿದೆ. ಮುಂದಿನ ದಿನಗಳಲ್ಲಿ ಇದಕ್ಕಿಂತಲೂ ಭೀಕರ ಜಲಪ್ರಳಯ ಸೃಷ್ಟಿಯಾಗುವ ಎಲ್ಲ ಸೂಚನೆಯನ್ನೂ ಹವಾಮಾನ ಇಲಾಖೆ ಕೊಟ್ಟಿದೆ.