
ಉತ್ತರ ಪ್ರದೇಶದ ಉನ್ನಾವೋ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಈ ಯುವತಿ ಉದ್ಯೋಗ ಕೋರಿ ಖಾಸಗಿ ಶಾಲೆಯ ಪ್ರಾಂಶುಪಾಲನ ಕಚೇರಿಗೆ ತೆರಳಿದ್ದಾಳೆ. ಈ ಸಂದರ್ಭದಲ್ಲಿ ಆತ ಶಿಕ್ಷಕಿ ಹುದ್ದೆ ನೀಡಲು ತನಗೆ ಮುತ್ತು ನೀಡುವಂತೆ ಕೇಳಿದ್ದಾನೆ. ಇದನ್ನು ಆ ಯುವತಿ ಸ್ಪಷ್ಟವಾಗಿ ನಿರಾಕರಿಸಿದ್ದು, ಇದೆಲ್ಲಾ ದೃಶ್ಯಾವಳಿ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ.
ಅಲ್ಲದೆ ಆ ಪ್ರಾಂಶುಪಾಲ ಲೈಂಗಿಕ ಸಂಬಂಧದ ಬೇಡಿಕೆಯನ್ನೂ ಇಟ್ಟಿದ್ದಾನೆ ಎನ್ನಲಾಗಿದ್ದು, ಈತನ ಈ ಎಲ್ಲ ವಿಚಾರವನ್ನು ಮೊದಲೇ ತಿಳಿದುಕೊಂಡಿದ್ದ ಯುವತಿ ಗುಪ್ತವಾಗಿ ಮೊಬೈಲ್ ಕ್ಯಾಮೆರಾ ಮೂಲಕ ರೆಕಾರ್ಡ್ ಮಾಡಿಕೊಂಡಿದ್ದಾರೆ. ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇದನ್ನು ವೀಕ್ಷಿಸಿದ ನೆಟ್ಟಿಗರು ಕಾಮುಕ ಪ್ರಾಂಶುಪಾಲನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.