ದಕ್ಷಿಣ ಭಾರತದ ಚಲನಚಿತ್ರಗಳು ಇತ್ತೀಚಿನ ದಿನಗಳಲ್ಲಿ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿವೆ. ಅದರಲ್ಲಿಯೂ ಕೆಲವೊಂದು ಚಿತ್ರಗಳ ದೃಶ್ಯ ಅಥವಾ ಹಾಡುಗಳ ಜನಮಾನಸದಲ್ಲಿ ನೆಲೆ ನಿಂತುಬಿಡುತ್ತವೆ. ಮಕ್ಕಳಿಂದ ಹಿಡಿದು ಎಲ್ಲರಿಗೂ ಅಚ್ಚುಮೆಚ್ಚಾಗುತ್ತದೆ.
ಅಂಥದ್ದೇ ಒಂದು ಚಿತ್ರ ಇತ್ತೀಚೆಗೆ ಬಿಡುಗಡೆಯಾದ ಮಣಿರತ್ನಂ ನಿರ್ದೇಶನದ ‘ಪೊನ್ನಿಯಿನ್ ಸೆಲ್ವನ್- 1’ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿರುವ ಈ ಚಿತ್ರವನ್ನು ಜನರು ಬಹಳ ಎಂಜಾಯ್ ಮಾಡುತ್ತಿದ್ದಾರೆ.
ಶಾಲೆಯ ಮಕ್ಕಳು ತಮ್ಮ ಶಿಕ್ಷಕರ ಜತೆ ಚಿತ್ರಮಂದಿರವೊಂದರಲ್ಲಿ ಈ ಚಿತ್ರ ವೀಕ್ಷಿಸುತ್ತಿದ್ದಾರೆ. ಚಿತ್ರದ ಪೊನ್ನಿ ನದಿ ಹಾಡೊಂದು ಮಕ್ಕಳನ್ನು ಆವರಿಸಿಕೊಂಡಿದ್ದು, ಮಕ್ಕಳು ಅದನ್ನು ನೋಡಿ ಎಂಜಾಯ್ ಮಾಡುತ್ತಿರುವುದನ್ನು ಕಾಣಬಹುದಾಗಿದೆ. ಶಿಕ್ಷಕರೂ ಹಾಡನ್ನು ಆನಂದಿಸುವುದನ್ನು ಕಾಣಬಹುದು. ಈ ವಿಡಿಯೋ ತಮಿಳುನಾಡಿನ ಮೆಟ್ಟುಪಾಳ್ಯಂನಲ್ಲಿರುವ ಥಿಯೇಟರ್ ಚಿತ್ರೀಕರಿಸಲಾಗಿದೆ.
ಅಂದಹಾಗೆ, ಕಲ್ಕಿ ಕೃಷ್ಣಮೂರ್ತಿ ಬರೆದಿರುವ ಪೊನ್ನಿಯಿನ್ ಸೆಲ್ವನ್-1 ಕಾದಂಬರಿಯನ್ನು ಆಧರಿಸಿದ ಚಿತ್ರ ಇದಾಗಿದೆ. ಈ ಚಿತ್ರವನ್ನು ನಿರ್ದೇಶಿಸುವುದು ತಮ್ಮ ಜೀವನದ ಕನಸು ಎಂದು ಮಣಿರತ್ನಂ ಹೇಳಿದ್ದಾರೆ. ಬಾಹುಬಲಿ ಸಕ್ಸಸ್ ನಂತರ ಈ ಸಿನಿಮಾ ಕೈಗೆತ್ತಿಕೊಂಡಿರುವುದಾಗಿಯೂ ಹೇಳಿದ್ದಾರೆ.
ಲೈಕಾ ಪ್ರೊಡಕ್ಷನ್ಸ್ ಮತ್ತು ಮದ್ರಾಸ್ ಟಾಕೀಸ್ ಜಂಟಿಯಾಗಿ ನಿರ್ಮಿಸಿದ ಸಿನಿಮಾದಲ್ಲಿ, ವಿಕ್ರಮ್, ಕಾರ್ತಿ, ಜಯಂ ರವಿ, ಶರತ್ ಕುಮಾರ್, ಐಶ್ವರ್ಯ ರೈ, ತ್ರಿಷಾ, ಐಶ್ವರ್ಯ ಲಕ್ಷ್ಮಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಎ.ಆರ್. ರೆಹಮಾನ್ ಹಾಡನ್ನು ರಚಿಸಿದ್ದಾರೆ. ಭಾರತದಲ್ಲಿ 20 ಕೋಟಿ ಬ್ಯುಸಿನೆಸ್ ಮಾಡಿದ ಸಿನಿಮಾ ವಿದೇಶದಲ್ಲಿ 35 ಕೋಟಿ ಗಳಿಸಿದೆ. ವಿಶ್ವಾದ್ಯಂತ ರೂ 455 ಪ್ಲಸ್ ಕೋಟಿ ಗಳಿಸಿದೆ.
https://twitter.com/Tronil1/status/1583084601911955458?ref_src=twsrc%5Etfw%7Ctwcamp%5Etweetembed%7Ctwterm%5E1583084601911955458%7Ctwgr%5E144ab29a962e8a7791588c36f5b5927fd266b2b7%7Ctwcon%5Es1_&ref_url=https%3A%2F%2Fwww.india.com%2Fviral%2Fviral-video-school-students-sing-groove-to-ponniyin-selvan-ponni-nadhi-song-in-theatre-fans-love-it-5698258%2F