ಸಫಾರಿಗೆ ಹೋಗೋದು ಅಂದರೆ ಅದರ ಅನುಭವವೇ ರೋಮಾಂಚನಕಾರಿಯಾಗಿ ಇರುತ್ತೆ. ಅದರಲ್ಲೂ ಇಂತಹ ಸಫಾರಿ ನಡುವೆ ಅನೇಕ ವನ್ಯಮೃಗಗಳು ಕಣ್ಣಿಗೆ ಬಿದ್ದರಂತೂ ಹಬ್ಬವೇ ಸರಿ.
ಆದರೆ ಈ ರೋಮಾಂಚನಕಾರಿ ಕ್ಷಣವು ಡೆಡ್ಲಿ ಕ್ಷಣವಾಗಿ ಬದಲಾಗಲು ಎರಡು ನಿಮಿಷಗಳು ಸಾಕು. ಹೀಗಾಗಿ ಸಫಾರಿ ಮಾಡುವಂತಹ ಸಂದರ್ಭಗಳಲ್ಲಿ ಹೀರೋನಂತೆ ಪೋಸ್ ಕೊಡುವುದಕ್ಕಿಂತ ಸುರಕ್ಷತೆಯ ಕಡೆಗೆ ಗಮನ ನೀಡುವುದು ಬುದ್ಧಿವಂತರ ಲಕ್ಷಣವಾಗಿದೆ.
ಸಫಾರಿಗೆ ತೆರಳುವ ವೇಳೆ ನಿಮಗೆ ಚಾಲಕರು ನೀಡುವ ಮಾರ್ಗದರ್ಶನಗಳನ್ನು ಚಾಚು ತಪ್ಪದೇ ಪಾಲಿಸುವುದು ತುಂಬಾನೇ ಸೂಕ್ತವಾಗಿದೆ. ಏಕೆಂದರೆ ನೀವು ಚಾಲಕರ ಮಾರ್ಗದರ್ಶನಗಳನ್ನು ಪಾಲಿಸದೇ ಹೋದಲ್ಲಿ ನಿಮ್ಮ ಜೀವವನ್ನೇ ದಂಡ ತೆರಬೇಕಾದ ಪರಿಸ್ಥಿತಿ ಎದುರಾದರೂ ಆಶ್ಚರ್ಯವಿಲ್ಲ.
ತಾಂಜೆನಿಯಾದ ಸೆರೆಂಗೆಟಿ ನ್ಯಾಷನಲ್ ಪಾರ್ಕ್ನಲ್ಲಿ ನಡೆದ ಘಟನೆಯೊಂದು ಈ ಎಲ್ಲಾ ಮಾತಿಗೆ ಪ್ರತ್ಯಕ್ಷ ಸಾಕ್ಷಿಯಾಗಿದೆ. ಸಫಾರಿ ವೇಳೆ ಪ್ರವಾಸಿಗರು ಕೂದಲೆಳೆ ಅಂತರದಲ್ಲಿ ಸಿಂಹದ ಬಾಯಿಯಿಂದ ಪಾರಾಗಿದ್ದಾರೆ.
ಈ ವಿಡಿಯೋವನ್ನು ಯುಟ್ಯೂಬ್ ಚಾನೆಲ್ನಲ್ಲಿ ಶೇರ್ ಮಾಡಲಾಗಿದೆ. ವ್ಯಕ್ತಿಯೊಬ್ಬ ಕಾರಿನ ಕಿಟಕಿಯನ್ನು ತೆರೆಯುತ್ತಾನೆ. ಕೂಡಲೇ ಗಂಡು ಸಿಂಹವೊಂದು ಕಾಣಿಸುತ್ತಿದೆ. ಕ್ಯಾಮರಾದಲ್ಲಿ ಸಿಂಹದ ಫೋಟೋವನ್ನು ಕ್ಲಿಕ್ಕಿಸಲು ಯತ್ನಿಸುತ್ತಿರುವಾಗಲೇ ಕಿಟಕಿಯತ್ತ ಸಿಂಹವು ಮುಖ ಮಾಡಿದೆ.
ಈ ವೇಳೆ ವಿಡಿಯೋದಲ್ಲಿ ಆತಂಕದಲ್ಲಿ ಕಿಟಕಿ ಬಂದ್ ಮಾಡಿ ಎಂದು ಹೇಳುವ ಧ್ವನಿಯೊಂದು ಕೇಳಿ ಬರುತ್ತದೆ. ಇನ್ನೇನು ಕಿಟಕಿ ಗಾಜನ್ನು ಬಂದ್ ಮಾಡಬೇಕು ಎನ್ನುವಷ್ಟರಲ್ಲಿ ಜಂಪ್ ಮಾಡಿದ ಸಿಂಹವು ಜೋರಾಗಿ ಘರ್ಜಿಸಿದೆ. ಇದರಿಂದ ಸಿಕ್ಕಾಪಟ್ಟೆ ಭಯಗೊಂಡಿದ್ದ ವ್ಯಕ್ತಿಯು ಹೇಗೋ ಕಾರಿನ ಕಿಟಕಿಯನ್ನು ಬಂದ್ ಮಾಡುವಲ್ಲಿ ಯಶಸ್ವಿಯಾಗುತ್ತಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ.
https://youtu.be/ztUYCE0SjJc