ವನ್ಯಜೀವಿ ಸಫಾರಿ ಕೈಗೊಂಡಾಗ ಎಲ್ಲರೂ ಭಾರಿ ಎಚ್ಚರಿಕೆಯಿಂದ ಇರುವುದು ಅವಶ್ಯಕವಾಗಿದೆ. ಚಾಲಕರು ಮತ್ತು ಮಾರ್ಗದರ್ಶಕರು ನೀಡಿದ ಸೂಚನೆಗಳನ್ನು ಅನುಸರಿಸುವುದು ಬಹಳ ಮುಖ್ಯವಾಗಿರುತ್ತದೆ. ಒಂದು ವೇಳೆ ನಿಯಮ ಉಲ್ಲಂಘಿಸಿದ್ರೆ ನಿಮ್ಮ ಜೀವಕ್ಕೆ ಕಂಟಕವಾಗಬಹುದು. ಅಂತಹ ಒಂದು ವಿಡಿಯೋ ಇದೀಗ ವೈರಲ್ ಆಗಿದೆ.
Shocking News: ರೇಬಿಸ್ ಲಸಿಕೆ ಪಡೆಯಲು ಬಂದವನಿಗೆ ಕೊರೊನಾ ಲಸಿಕೆ
ತಾಂಜಾನಿಯಾದ ಸೆರೆಂಗೆಟಿ ರಾಷ್ಟ್ರೀಯ ಉದ್ಯಾನವನದಲ್ಲಿ ನಡೆದಿರುವ ಘಟನೆ ಇದಾಗಿದೆ. 2020 ರಲ್ಲಿ ಮಸಾಯಿ ಸೈಟಿಂಗ್ಸ್‌ನ ಯೂಟ್ಯೂಬ್ ಚಾನೆಲ್‌ನಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಗಂಡು ಸಿಂಹವೊಂದು ತನ್ನ ಪಾಡಿಗೆ ತಾನು ಕೂತಿದ್ದರೆ, ಕಾರಿನ ಕಿಟಕಿಯನ್ನು ಸರಿಸಿದ ಪ್ರವಾಸಿಗರು ಕೆಲವು ಫೋಟೋಗಳನ್ನು ಕ್ಲಿಕ್ಕಿಸಿದ್ದಾರೆ.
ಅಷ್ಟೇ ಅಲ್ಲ ಸಿಂಹವನ್ನು ಸ್ಪರ್ಶಿಸಲು ಕೂಡ ಪ್ರಯತ್ನಿಸಿದ್ದಾರೆ. ಈ ವೇಳೆ ಕೋಪಗೊಂಡ ಸಿಂಹ ಕಾರಿನತ್ತ ತಿರುಗಿ ಘರ್ಜಿಸಿದೆ. ಹೆದರಿದ ಪ್ರವಾಸಿಗರು ಪಕ್ಕದ ಸೀಟಿನತ್ತ ಹಾರಿದ್ದಾರೆ. ಕೂಡಲೇ ಕಾರಿನ ಗಾಜನ್ನು ಮುಚ್ಚಿದ್ದಾರೆ. ಸದ್ಯ ಈ ವಿಡಿಯೋ ಭಾರಿ ವೈರಲ್ ಆಗಿದೆ.
https://www.youtube.com/watch?v=ztUYCE0SjJc