ಕೊಯಮತ್ತೂರು: ಹಿಂದೂಗಳ ಪ್ರಮುಖ ಹಬ್ಬಗಳಲ್ಲಿ ಒಂದಾದ ಮಹಾಶಿವರಾತ್ರಿಯನ್ನು ಕೊಯಮತ್ತೂರಿನಲ್ಲಿ ಇರುವ ಸದ್ಗುರು ಜಗ್ಗಿ ವಾಸುದೇವ ಅವರ ಇಶಾ ಯೋಗ ಕೇಂದ್ರದಲ್ಲಿ ಹಲವಾರು ವರ್ಷಗಳಿಂದ ಅತ್ಯಂತ ಉತ್ಸಾಹದಿಂದ ಆಚರಿಸಲಾಗುತ್ತಿದೆ.
ಕೊಯಮತ್ತೂರು ಮೂಲದ ಇಶಾ ಫೌಂಡೇಶನ್‌ನ ಸಂಸ್ಥಾಪಕ ಮತ್ತು ಕಾರ್ಯನಿರ್ವಾಹಕ ನಿರ್ದೇಶಕರಾದ ಸದ್ಗುರು ಅವರು ಶಕ್ತಿಯುತ ಪ್ರದರ್ಶನ ನೀಡುವ ಮೂಲಕ ಹಬ್ಬವನ್ನು ಆಚರಿಸಿದ್ದಾರೆ.
ಇದರ ವಿಡಿಯೋ ವೈರಲ್ ಆಗಿದೆ. ವೈರಲ್ ವೀಡಿಯೊದಲ್ಲಿ, ಸದ್ಗುರುಗಳು ಹಾಡಿಗೆ ಹೆಜ್ಜೆ ಹಾಕುವುದನ್ನು ನೋಡಬಹುದು. ಅಲ್ಲಿ ನೆರೆದಿದ್ದ ಐದು ಲಕ್ಷಕ್ಕೂ ಅಧಿಕ ಭಕ್ತರು ಸದ್ಗುರು ಅವರ ಈ ನೃತ್ಯಕ್ಕೆ ಖುಷಿಯಿಂದ ಚಪ್ಪಾಳೆ ತಟ್ಟುವುದನ್ನು ಕೇಳಬಹುದು .
ಸೇವ್ ಸಾಯಿಲ್ (ಮಣ್ಣನ್ನು ಉಳಿಸಿ) ಅಭಿಯಾನವನ್ನು ಕಳೆದ ವರ್ಷ ಸದ್ಗುರು ಆಚರಿಸಿದ್ದರು. ಹಲವಾರು ದೇಶಗಳನ್ನು ತಮ್ಮ ಬೈಕ್ನಲ್ಲಿ ಸುತ್ತಿ ಮಣ್ಣಿನ ರಕ್ಷಣೆ ಕುರಿತು ಅಭಿಯಾನ ನಡೆಸಿದ್ದಾರೆ. ಈ ವಿಡಿಯೋದ ಕೊನೆಯಲ್ಲಿ ಸೇವ್ ಸಾಯಿಲ್ ಇರುವ ಫಲಕದ ಬಳಿ ಬಂದು ಸದ್ಗುರು ಅವರು ಥಮ್ಸ್ ಅಪ್ ಮಾಡಿದ್ದನ್ನು ನೋಡಬಹುದು.
ಸದ್ಗುರು ಅವರು ಆಧ್ಯಾತ್ಮಿಕವಾಗಿ ಆನಂದಿಸುತ್ತಾರೆ. ನೃತ್ಯದಿಂದ ಕಂಪನವನ್ನು ಸೃಷ್ಟಿಸುತ್ತಾರೆ. ಪ್ರತಿಬಾರಿಯೂ ಹೀಗೆ ನೃತ್ಯದ ಮೂಲಕ ಜನರನ್ನು ಜಾಗರೂಕನ್ನಾಗಿ ಮಾಡುತ್ತಿರುವುದಾಗಿ ಹಲವಾರು ಕಮೆಂಟಿಗರು ತಿಳಿಸಿದ್ದಾರೆ.
https://youtu.be/503zchBF9fM