alex Certify ಬಸ್ಕಿ ಹೊಡೆದ್ರೆ ಫ್ರೀಯಾಗಿ ಸಿಗುತ್ತೆ ನೋಡಿ ಬಸ್ ಟಿಕೆಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಸ್ಕಿ ಹೊಡೆದ್ರೆ ಫ್ರೀಯಾಗಿ ಸಿಗುತ್ತೆ ನೋಡಿ ಬಸ್ ಟಿಕೆಟ್

ಬಸ್ಕಿ ಹೊಡೆದ್ರೆ ಬಸ್ ಟಿಕೆಟ್ ಸಿಗುತ್ತಾ? ಖಂಡಿತ ಸಿಗುತ್ತೆ. ಆದ್ರೆ ಕೆಲವು ನಿಯಮಗಳಿವೆ. ರೊಮೇನಿಯಾದ ನಗರವೊಂದು ಜನರಿಗೆ 2 ನಿಮಿಷಗಳಲ್ಲಿ 20 ಸ್ಕ್ವಾಟ್‌ (ಬಸ್ಕಿ)ಗೆ ಉಚಿತ ಬಸ್ ಟಿಕೆಟ್‌ಗಳನ್ನು ನೀಡುತ್ತಿದೆ.

ಈ ಮೂಲಕ ಜನರ ಆರೋಗ್ಯದ ಬಗ್ಗೆ ಕಾಳಜಿ ಜೊತೆಗೆ ಆರೋಗ್ಯಯುತ ನಗರ ನಿರ್ಮಾಣಕ್ಕೆ ಲಾಭದಾಯಕ ಸವಾಲನ್ನು ಜನ ಪ್ರಯತ್ನಿಸುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿವೆ.

ಇತರ ಅನೇಕ ದೇಶಗಳಂತೆ ರೊಮೇನಿಯನ್ ನಗರವಾದ ಕ್ಲೂಜ್-ನಪೋಕಾವು ಬೆಳೆಯುತ್ತಿರುವ ಶಕ್ತಿ ಮತ್ತು ಹವಾಮಾನ ಬಿಕ್ಕಟ್ಟಿನೊಂದಿಗೆ ಸಾರ್ವಜನಿಕ ಸಾರಿಗೆಯನ್ನು ಉತ್ತೇಜಿಸುತ್ತಿದೆ. ಈ ಪ್ರವೃತ್ತಿಯನ್ನು ಮುಂದುವರಿಸಲು ಸ್ಥಳೀಯ ಸಾರ್ವಜನಿಕ ಸಾರಿಗೆಯಲ್ಲಿ ಜನ ಪ್ರಯಾಣಿಸುವ ಮೂಲಕ ಆರೋಗ್ಯಕರ ಜೀವನಶೈಲಿಯನ್ನು ಸಂಯೋಜಿಸಲು ನಗರವು ನಿರ್ಧರಿಸಿದೆ. ಇದಕ್ಕಾಗಿ 20 ಬಸ್ಕಿ ಹೊಡೆದ್ರೆ ಉಚಿತ ಬಸ್ ಟಿಕೆಟ್ ನೀಡೋದಾಗಿ ಘೋಷಿಸಿದೆ. ಉಚಿತ ಬಸ್ ಪ್ರಯಾಣಕ್ಕಾಗಿ ಬೂತ್‌ನ ಮುಂದೆ ಹುಡುಗಿಯೊಬ್ಬಳು 20 ಸ್ಕ್ವಾಟ್‌ಗಳನ್ನು ಪ್ರದರ್ಶಿಸುವ ವೀಡಿಯೊ ಇಂಟರ್ನೆಟ್‌ನಲ್ಲಿ ಸಂಚಲನವನ್ನು ಸೃಷ್ಟಿಸಿದೆ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...