ಹೊಂಡದಲ್ಲಿ ಬಿದ್ದು ಒದ್ದಾಡುತ್ತಿದ್ದ ಗಜರಾಜನ ರಕ್ಷಣೆ..! 26-03-2022 7:30AM IST / No Comments / Posted In: Latest News, India, Live News ಮೃದು ಸ್ವಭಾವದ ಜೀವಿ ಅಂತಾನೇ ಕರೆಯಲ್ಪಡುವ ದೈತ್ಯ ಗಾತ್ರದ ಆನೆಗಳು, ಕ್ಷಣಾರ್ಧದಲ್ಲಿ ಮರಗಳನ್ನು ಉರುಳಿಸಬಲ್ಲವು. ಕೋಪ ಬಂದ್ರೆ ಅಟ್ಟಾಡಿಸಿ ಓಡಿಸಿಕೊಂಡು ಬರುತ್ತವೆ. ಕೆಲವೊಮ್ಮೆ ಇಂತಹ ಶಕ್ತಿಶಾಲಿ ಆನೆಗಳು ಹೊಂಡ ಅಥವಾ ಜೌಗು ಪ್ರದೇಶಗಳಲ್ಲಿ ಸಿಲುಕಿಕೊಳ್ಳುತ್ತವೆ. ಈ ಅಗ್ನಿಪರೀಕ್ಷೆಯಿಂದ ಅರಣ್ಯ ಸಿಬ್ಬಂದಿ ಅವುಗಳನ್ನು ಕಾಪಾಡಲು ಮುಂದಾಗುತ್ತಾರೆ. ಇತ್ತೀಚೆಗೆ, ತಮಿಳುನಾಡಿನ ನೀಲಗಿರಿ ಜಿಲ್ಲೆಯ ಜೌಗು ಪ್ರದೇಶದಲ್ಲಿ ಸಿಲುಕಿಕೊಂಡಿದ್ದ ಆನೆಯನ್ನು ಅರಣ್ಯ ಸಿಬ್ಬಂದಿ ರಕ್ಷಿಸಿದ್ದಾರೆ. ತಮಿಳುನಾಡು ಅರಣ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸುಪ್ರಿಯಾ ಸಾಹು ಅವರ ಪ್ರಕಾರ 25 ವರ್ಷದ ಆನೆಯು ಗುಡಲೂರು ಪ್ರದೇಶದ ಜೌಗು ಪ್ರದೇಶದಲ್ಲಿ ಸಿಲುಕಿಕೊಂಡಿದೆ ಎಂದು ಹೇಳಿದ್ದಾರೆ. ಆನೆಯನ್ನು ರಕ್ಷಿಸುತ್ತಿರುವ ವಿಡಿಯೋವನ್ನು ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ದಣಿದ ಆನೆಯು ತನ್ನ ಬದಿಯಲ್ಲಿ ಮಲಗಿರುವುದನ್ನು ತೋರಿಸುತ್ತದೆ. ಅರಣ್ಯ ಸಿಬ್ಬಂದಿ ಎಸೆದ ಹಗ್ಗವನ್ನು ಹಿಡಿದಿಟ್ಟುಕೊಂಡು ಆನೆ ಅಂತಿಮವಾಗಿ ಹೊಂಡದಿಂದ ಮೇಲಕ್ಕೆ ಏರಿದೆ. ಸಾಮಾಜಿಕ ಜಾಲತಾಣದಲ್ಲಿ ಆನೆಯನ್ನು ರಕ್ಷಿಸುವ ವಿಡಿಯೋ ಹಂಚಿಕೊಳ್ಳಲಾಗಿದ್ದ, ಕ್ಷಣಾರ್ಧದಲ್ಲಿ ವೈರಲ್ ಆಗಿದೆ. ಅರಣ್ಯ ಇಲಾಖೆ ಸಿಬ್ಬಂದಿಯ ಶ್ರಮಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. Inspiring team work by #TNforesters in rescuing a 25-year-old elephant stuck in a swamp in Gudalur, #Nilgiris The elephant too did not give up and showed exemplary fighting power to get out of the swamp holding on to the rope thrown by her rescuers.Hats off 👍 #TNForest pic.twitter.com/YvT2Zmbcue — Supriya Sahu IAS (@supriyasahuias) March 24, 2022