alex Certify ನಗು ತರಿಸುತ್ತೆ ಟಿವಿ ವರದಿಗಾರನ ಪ್ರಶ್ನೆಗೆ ಪುಟ್ಟ ಹುಡುಗ ನೀಡಿದ ಉಲ್ಲಾಸದಾಯಕ ಉತ್ತರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಗು ತರಿಸುತ್ತೆ ಟಿವಿ ವರದಿಗಾರನ ಪ್ರಶ್ನೆಗೆ ಪುಟ್ಟ ಹುಡುಗ ನೀಡಿದ ಉಲ್ಲಾಸದಾಯಕ ಉತ್ತರ

ಶಾಲಾ ವಿದ್ಯಾರ್ಥಿ ಮತ್ತು ವರದಿಗಾರನ ನಡುವಿನ ಉಲ್ಲಾಸಮಯ ಪ್ರಶ್ನೋತ್ತರವು ಸಾಮಾಜಿಕ ಜಾಲತಾಣದಲ್ಲಿ ಹಾಸ್ಯದ ವಿಷಯವಾಗಿ ವೈರಲ್​ ಆಗುತ್ತಿದೆ.

ಟಿವಿ ವರದಿಗಾರ ಬಿಹಾರದ 6 ನೇ ತರಗತಿಯ ಹುಡುಗನಿಗೆ ಕೆಲವು ಪ್ರಶ್ನೆಗಳನ್ನು ಕೇಳುತ್ತಾನೆ, ಆತ ನೀಡುವ ಉತ್ತರಗಳು ತುಂಬಾ ತಮಾಷೆಯಾಗಿವೆ.

ವರದಿಗಾರ ಮೊದಲು ನೆಚ್ಚಿನ ವಿಷಯ ಯಾವುದೆಂದು ಕೇಳುತ್ತಾನೆ, ಆದರೆ ಪ್ರಶ್ನೆಯನ್ನು ಸರಿಯಾಗಿ ಅರ್ಥಮಾಡಿಕೊಳ್ಳದೆ, ಆತ್ಮವಿಶ್ವಾಸದಿಂದ ಬೈಗನ್​ (ಬದನೆ) ಎಂದು ಉತ್ತರಿಸುತ್ತಾನೆ. ನಂತರ ವರದಿಗಾರ ಹುಡುಗನನ್ನು ಸಬ್ಜೆಕ್ಟ್​ ಎಂದು ಒತ್ತಿ ಕೇಳಿದಾಗ, ಹುಡುಗ “ಓ ಕ್ಷಮಿಸಿ, ಇಂಗ್ಲಿಷ್​” ಎಂದು ಹೇಳುತ್ತಾನೆ.

” ಇಂಗ್ಲಿಷ್​ನಲ್ಲಿ ಯಾವ ಕವಿತೆ ನೆನಪಿದೆ?” ಎಂದು ಪ್ರಶ್ನಿಸಿದಾಗ, ಈ ಬಾರಿಯೂ ಹುಡುಗನು ತಪ್ಪು ಉತ್ತರದೊಂದಿಗೆ ಆತ್ಮವಿಶ್ವಾಸದಿಂದ ಉತ್ತರಿಸುತ್ತಾನೆ, ಹೌದು55. ನಾನು 55….. 100 ರವರೆಗೆ ಬರೆಯಬಲ್ಲೆ ಎಂದು.

ಬಳಿಕ, ದೇಶದ ಪ್ರಧಾನಿ ಯಾರೆಂದು ಹೇಳಲು ವರದಿಗಾರ ಕೇಳಿದಾಗ “ನಿತೀಶ್​ ಕುಮಾರ್​” ಮತ್ತು ನಂತರ “ಲಾಲು ಯಾದವ್​” ಎಂದು ಉತ್ತರಿಸಿಬಿಡುತ್ತಾನೆ.

ಹತಾಶೆಗೊಂಡ ವರದಿಗಾರ ಪ್ರಧಾನಿ ಪದವನ್ನು ಒತ್ತಿ ಹೇಳಿದಾಗ, “ಮೋದಿ” ಎಂದು ಹೇಳುತ್ತಾನೆ. ಪೂರ್ಣ ಹೆಸರನ್ನು ಹೇಳುವಂತೆ ಕೇಳಿದಾಗ, ಮೋದಿ ಸರ್ಕಾರ್ ಎಂಬ ಉತ್ತರ ಬರುತ್ತದೆ.

ಒಟ್ಟಾರೆ ಇಡೀ ಸಂದರ್ಶನ ಸ್ವಾರಸ್ಯಕರವಾಗಿದ್ದು, ನೆಟ್ಟಿಗರಿಗೆ ಖುಷಿ ತರಿಸಿದೆ, ನಗುವಂತೆ ಮಾಡುತ್ತದೆ. ವಿಡಿಯೊ ಪೋಸ್ಟ್​ ಆದ ಬಳಿಕ 9 ಲಕ್ಷಕ್ಕೂ ಹೆಚ್ಚು ಲೈಕ್​ ಮತ್ತು ನೂರಾರು ಉಲ್ಲಾಸ ಮಯ ಕಾಮೆಂಟ್​ ಬಂದಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...