ನಾಯಿ ಮತ್ತು ಮನುಷ್ಯರ ನಡುವೆ ಅನ್ಯೋನ್ಯತೆ ಬಹಳ ಚೆಂದವಾದದ್ದು. ಇತ್ತೀಚೆಗೆ ಈ ಅನ್ಯೋನ್ಯತೆಗೆ ಉದಾಹರಣೆಯಾಗಿ ಸಾಕಷ್ಟು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುತ್ತದೆ.
ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ನಾಯಿಯೊಂದು ಪುಟ್ಟ ಬಾಲಕನ ನಿದ್ರೆಗೆ ಅಡ್ಡಿಪಡಿಸುವ ಆತನ ತಂದೆಯ ಕೈಯನ್ನು ಬದಿಗೆ ಸರಿಸಿ ನಿದ್ರೆಗೆ ಅವಕಾಶ ಮಾಡಿಕೊಡುವುದನ್ನು ಕಾಣಬಹುದು. ನಾಯಿಯ ಮುಗ್ಧತೆ, ಮಗುವಿನ ಬಗೆಗಿನ ಕಾಳಜಿ ಎದ್ದು ಕಾಣಿಸುತ್ತದೆ.
ನಿದ್ರೆಯಲ್ಲಿದ್ದ ಮಗನನ್ನು ತಂದೆ ಎಬ್ಬಿಸಲು ಬಂದಾಗ ನಾಯಿಯು ತನ್ನ ಚೋಟಿನಿಂದ ಬದಿಗೆ ಸರಿಸುತ್ತದೆ. ಬಳಿಕ ಮಗುವನ್ನು ನೆಕ್ಕಿ ಮುದ್ದಾಡುತ್ತದೆ. ಬಳಿಕ ಆ ಬಾಲಕ ಕೂಡ ನಾಯಿಗೆ ಒರಗಿ ನಿದ್ದೆ ಮಾಡುವುದು, ಮುದ್ದು ಮಾಡುವುದನ್ನೂ ಸಹ ವಿಡಿಯೋದಲ್ಲಿ ನೋಡಬಹುದಾಗಿದೆ. ಈ ವಿಡಿಯೋ 3.85 ಲಕ್ಷ ವೀಕ್ಷಣೆ ಕಂಡಿದ್ದು, 72 ಸಾವಿರ ಲೈಕ್ ಪಡೆದುಕೊಂಡಿದೆ.