ಟ್ರಾಫಿಕ್ ರೂಲ್ಸ್ ಏನು ? ಅದನ್ನು ಜಾರಿ ಮಾಡುವುದರ ಹಿಂದೆ ಇರೋ ಉದ್ದೇಶ ಏನೇನು ಅನ್ನೋ ಎಲ್ಲರಿಗೂ ಗೊತ್ತು. ಆದ್ರೂ ಜನ ಬ್ರೇಕ್ ಮಾಡೋದಕ್ಕೆ ಹಿಂದೆ ಮುಂದೆ ನೋಡೋಲ್ಲ. ಆ ರೂಲ್ಸ್ ಯಾರಿಗಾಗಿ ಜಾರಿಗೆ ತರಲಾಗಿದೆ ಅನ್ನೋದು ಯಾರೂ ವಿಚಾರ ಮಾಡೋದು ದೂರದ ಮಾತು. ಆಗಿದ್ದಾಗಲಿ ಅಂತ ಉಲ್ಟಾ ಟ್ರಾಫಿಕ್ ಪೊಲೀಸರಿಗೆನೇ ಬೈಯ್ಯಕ್ಕೊಂಡು ಗಾಡಿ ಓಡಿಸ್ತಿರ್ತಾರೆ. ಅದರ ಪರಿಣಾಮ ಎಷ್ಟೋ ಜನ ಅಪಘಾತಗಳಾದಾಗ ಜೀವವನ್ನೇ ಕಳೆದುಕೊಂಡಿದ್ದಾರೆ. ಅದರಲ್ಲೂ ವಾಹನ ಸವಾರರಿಗೆ ಹೆಲ್ಮೆಟ್ ಕಡ್ಡಾಯ ಅನ್ನೋ ರೂಲ್ಸ್ ಇದ್ದರೂ, ಅದನ್ನ ಎಷ್ಟೋ ದ್ವಿಚಕ್ರವಾಹನ ಸವಾರರು ಇಂದಿಗೂ ಗಂಭೀರವಾಗಿ ತೆಗೆದುಕೊಂಡಿಲ್ಲ. ಅಂಥವರಿಗೆನೇ ಪೊಲೀಸ್ ಅಧಿಕಾರಿಯೊಬ್ಬರು ಹೆಲ್ಮೆಟ್ ಧರಿಸಬೇಕು ಅನ್ನೋದನ್ನ ಮನವರಿಕೆ ಮಾಡಿಸಿದ್ದಾರೆ ನೋಡಿ.
ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗಿದ್ದು, ಈ ವಿಡಿಯೋ ನೋಡಿ ಎಷ್ಟೋ ಜನರು ತಮ್ಮ ತಪ್ಪೇನು ಅನ್ನೋದನ್ನ ಅರ್ಥ ಮಾಡಿಕೊಂಡಿದ್ದಾರೆ. ಅಷ್ಟಕ್ಕೂ ಈ ವಿಡಿಯೋವನ್ನು ಜೈಕಿ ಯಾದವ್ ಅನ್ನುವವರು ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋದಲ್ಲಿ, ನಡು ರಸ್ತೆಯಲ್ಲೇ ಪೊಲೀಸ್ ಅಧಿಕಾರಿ ಹೆಲ್ಮೆಟ್ ಧರಿಸದ ಸವಾರನಿಗೆ ಹೆಲ್ಮೆಟ್ ಹಾಕಿ ಮಂತ್ರ ಪಠಿಸಿದಂತೆ ಪಠಿಸಿ ಜಾಗೃತಿ ಮೂಡಿಸಿದ್ಧಾರೆ. ಅಷ್ಟೆ ಅಲ್ಲ ಆ ವಾಹನ ಸವಾರನಿಗೆ ಹೆಲ್ಮೆಟ್ ಹಾಕಿ ಉಪಕಾರ ಮಾಡಿದಿರಿ ಅನ್ನೋ ಅರ್ಥದಲ್ಲಿ ಕೈ ಮುಗಿದಿದ್ದಾರೆ ಈ ಪೊಲೀಸಪ್ಪ. “ಈ ಸಹೋದರನಿಗೆ ತನ್ನ ಮದುವೆಯಲ್ಲೂ ಸಹ ಇಂತಹ ಗೌರವ ಸಿಕ್ಕಿರಲು ಸಾಧ್ಯವಿಲ್ಲ“ ಎಂದು ಜೈಕಿ ಯಾದವ್ ವಿಡಿಯೋ ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ.
ಸುಮಾರು 191,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದೆ. ಇನ್ನು 10,000ಕ್ಕೂ ಹೆಚ್ಚು ಲೈಕ್ಸ್ಗಳನ್ನು ಗಳಿಸಿದೆ. ವಿಡಿಯೋದ ಕಾಮೆಂಟ್ ಬಾಕ್ಸ್‌ನಲ್ಲಿ ಓರ್ವ ಬಳಕೆದಾರ ಪೋಲೀಸ್ ಅಧಿಕಾರಿ ಹೆಸರು ಭಗವತ್ ಪ್ರಸಾದ್ ಪಾಂಡೆ ಎಂದು ಬಹಿರಂಗಪಡಿಸಿದ್ದಾರೆ.
https://twitter.com/JaikyYadav16/status/1568225563390914561?ref_src=twsrc%5Etfw%7Ctwcamp%5Etweetembed%7Ctwterm%5E1568225563390914561%7Ctwgr%5E080f80501541f1bfdd4a0704f89c669a9fb9c923%7Ctwcon%5Es1_&ref_url=https%3A%2F%2Fwww.news18.com%2Fnews%2Fbuzz%2Fviral-video-policemans-unique-response-to-man-riding-bike-without-helmet-5974129.html