ಇಬ್ಬರು ವ್ಯಕ್ತಿಗಳು ಸಾಗರದಲ್ಲಿ ಪ್ಯಾಡಲ್ಬೋರ್ಡಿಂಗ್ ಮಾಡುವಾಗ ಅನಿರೀಕ್ಷಿತವಾಗಿ 12 ತಿಮಿಂಗಿಲಗಳನ್ನು ಕಂಡು ಆಶ್ಚರ್ಯಚಕಿತರಾಗಿದ್ದಾರೆ. ಎರಡು ಪ್ಯಾಡಲ್ ಬೋರ್ಡರ್‌ಗಳನ್ನು ಆಗಸ್ಟ್ 16 ರಂದು ಅರ್ಜೆಂಟೀನಾದ ಮಾಂಟೆ ಹೆರ್ಮೊಸೊ ಸಾಗರದಲ್ಲಿ ಪ್ಯಾಡಲ್ಬೋರ್ಡಿಂಗ್ ಮಾಡುವಾಗ ತಿಮಿಂಗಿಲಗಳ ಪಾಡ್ ಸಮೀಪಿಸಿದೆ.
ಈ ದೃಶ್ಯವನ್ನು ಚಿತ್ರೀಕರಿಸಲಾಗಿದ್ದು, ವೈರಲ್ ಆಗಿದೆ. ಪಾಡ್‌ನಲ್ಲಿ ಒಟ್ಟು 12 ತಿಮಿಂಗಿಲಗಳಿವೆ ಎಂದು ಇಬ್ಬರು ವ್ಯಕ್ತಿಗಳು ಸ್ಥಳೀಯ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಇಬ್ಬರು ಪುರುಷರು ಸುಮಾರು ಒಂದು ಗಂಟೆ ಕಾಲ ತಿಮಿಂಗಿಲಗಳ ಪಕ್ಕದಲ್ಲಿ ಈಜಿದ್ದಾರೆ. ಇಬ್ಬರು ಪುರುಷರು ತಮ್ಮ ಪ್ಯಾಡಲ್ ಬೋರ್ಡ್‌ಗಳನ್ನು ರೋಯಿಂಗ್ ಮಾಡುತ್ತಿರಬೇಕಾದ್ರೆ ತಿಮಿಂಗಿಲಗಳು ಅವರಿಬ್ಬರನ್ನು ಸುತ್ತುವರಿದಿದೆ. ವಿಡಿಯೋ ಮಾಡುತ್ತಿದ್ದ ವೇಳೆ, ಒಬ್ಬ ಪ್ಯಾಡಲ್ಬೋರ್ಡರ್ ತನ್ನ ಹಲಗೆಯಿಂದ ಕೆಳಕ್ಕೆ ಬೀಳುತ್ತಾನೆ. ಆದರೆ ಅವರಿಬ್ಬರೂ ಈ ಅನುಭವವು ತಮಗೆ ಅಪಾರವಾದ ಸಂತೋಷವನ್ನು ನೀಡಿತು ಎಂದು ಹೇಳಿದ್ರು.
ತಿಮಿಂಗಿಲಗಳು ನರಭಕ್ಷಕವಲ್ಲದ್ದರಿಂದ ಅವರಿಗೆ ಯಾವುದೇ ರೀತಿಯ ಪ್ರಾಣಾಪಾಯ ಸಂಭವಿಸಿಲ್ಲ ಹಾನಿಯಾಗಲಿಲ್ಲ. ಈ ವಿಡಿಯೋ 22 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳೊಂದಿಗೆ ವೈರಲ್ ಆಗಿದೆ. ವಿಡಿಯೋದಲ್ಲಿ, ತಿಮಿಂಗಿಲಗಳ ಪಾಡ್ ಸಮುದ್ರದ ಮೇಲ್ಮೈಯಲ್ಲಿ ಸಮ್ಮೋಹನಗೊಳಿಸುವ ರೀತಿಯಲ್ಲಿ ಈಜುತ್ತಿದ್ದಾಗ ಒಟ್ಟಿಗೆ ಕೂಡಿಕೊಂಡಿತ್ತು.