
ನ್ಯೂಸ್ 18 ಇಂಡಿಯಾ ವಾಹಿನಿ ನೇರ ಪ್ರಸಾರ ಕಾರ್ಯಕ್ರಮವೊಂದನ್ನು ನಡೆಸ್ತಿದ್ದ ವೇಳೆ ಪ್ರೇಕ್ಷಕರ ಗ್ಯಾಲರಿಯಲ್ಲಿ ನಿಂತಿದ್ದ ಯುವಕ ಕ್ರಿಕೆಟ್ ಬೆಟ್ಟಿಂಗ್ ಅಪ್ಲಿಕೇಷನ್ ನಲ್ಲಿ 96 ಲಕ್ಷ ರೂಪಾಯಿ ಕಳೆದುಕೊಂಡಿರುವಾಗಿ ತಪ್ಪೊಪ್ಪಿಕೊಂಡಿದ್ದ.
ಜಾಹೀರಾತನ್ನು ನೋಡಿದ ನಂತರ ಆರಂಭದಲ್ಲಿ ತನ್ನ ಬಿ.ಟೆಕ್ ಶಿಕ್ಷಣಕ್ಕಾಗಿ ಹಣವನ್ನು ಜೂಜಾಡಲು ಬಳಸಿದ್ದಾಗಿ ಯುವಕ ಬಹಿರಂಗಪಡಿಸಿದ್ದಾನೆ. ವ್ಯಸನ ಬೆಳೆಯುತಾ ಹೋದಂತೆ ಅವನು ಇತರರಿಂದ ಹಣವನ್ನು ಎರವಲು ಪಡೆದು ಸಾಲದ ಸುಳಿಗೆ ಸಿಲುಕಿದ. ಹಣಕ್ಕಾಗಿ ಮೋಸದ ಕೃತ್ಯದಲ್ಲೂ ತೊಡಗಿದ್ದ. ಇದರಿಂದ ಅವರ ಕುಟುಂಬ ಯುವಕನ ಮುಖವನ್ನೂ ನೋಡದೇ ಅವನನ್ನು ಅವಮಾನಿಸಿದೆ. ನನ್ನ ತಾಯಿ ಕೂಡ ನನ್ನೊಂದಿಗೆ ಮಾತನಾಡುತ್ತಿಲ್ಲ ಎಂದು ಯುವಕ ಅವಲತ್ತುಕೊಂಡಿದ್ದಾನೆ.