
ಪೆಟ್ರೋಲ್ ಪಂಪ್ ನೌಕರ ಆಕಸ್ಮಿಕವಾಗಿ ಉದುರಿಸಿಕೊಂಡ ಹಣವನ್ನು ಚಾಲಾಕಿ ಗ್ರಾಹಕ ತರಾತುರಿಯಲ್ಲಿ ಎಗರಿಸಿಕೊಂಡು ಓಟಕಿತ್ತ ಪ್ರಸಂಗ, ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪೆಟ್ರೋಲ್ ಪಂಪ್ನ ಇಬ್ಬರು ನೌಕರರು ಪೆಟ್ರೋಲ್ ಬಂಕ್ನಲ್ಲಿ ಯಾವುದೇ ಗ್ರಾಹಕರು ಇಲ್ಲದಿದ್ದಾಗ ತಮಾಷೆ ಮಾಡಿಕೊಳ್ಳುತ್ತಿರುವಾಗಿನಿಂದ ವಿಡಿಯೊ ಪ್ರಾರಂಭವಾಗುತ್ತದೆ. ಅವರಿಬ್ಬರು ಆಟವಾಡುವಾಗ, ಒಬ್ಬ ನೌಕರ ತಮಾಷೆಯಾಗಿ ಇನ್ನೊಬ್ಬನನ್ನು ಹೊಡೆಯಲು ಪ್ರಯತ್ನಿಸುತ್ತಾನೆ. ಈ ಸಮಯದಲ್ಲಿ, ಅವನ ಜೇಬಿನಿಂದ ಹಣದ ಕಂತೆ ಬೀಳುತ್ತದೆ.
ಉದ್ಯೋಗಿಗೆ ಹಣ ಉದುರಿದ್ದು ತಿಳಿಯಲೇ ಇಲ್ಲ. ಪೆಟ್ರೋಲ್ ಪಂಪ್ ಬಳಿ ಸ್ಕೂಟರ್ನಲ್ಲಿ ಹೋಗುತ್ತಿದ್ದ ವ್ಯಕ್ತಿ ಬಿದ್ದ ನೋಟಿನ ಕಟ್ಟನ್ನು ಗಮನಿಸುತ್ತಾನೆ. ಬಳಿಕ ಪೆಟ್ರೋಲ್ ಪಂಪ್ ಬಳಿ ತನ್ನ ವಾಹನ ತಂದು ಇಂಧನ ತುಂಬಿಸುವ ಹಾಗೆ ನಟನೆ ಮಾಡುತ್ತಾನೆ.
ಅಷ್ಟೇ ಅಲ್ಲದೇ ಈ ಸಮಯದಲ್ಲಿ ತನ್ನ ಪಾದದಿಂದ ಹಣವನ್ನು ಗುಟ್ಟಾಗಿ ಮುಚ್ಚುತ್ತಾನೆ. ಪುನಃ ಅಲ್ಲಿನ ನೌಕರರು ಕೆಲಸದಲ್ಲಿ ನಿರತರಾಗಿರುವಾಗ, ಸ್ಕೂಟರ್ ಚಾಲಕ ಪಾದದ ಕೆಳಗಿದ್ದ ನೋಟಿನ ಕಟ್ಟನ್ನು ಎತ್ತಿಕೊಂಡು ವೇಗವಾಗಿ ಹೊರಟುಬಿಡುತ್ತಾನೆ.
ನಟ ಅಕ್ಷಯ್ ಕುಮಾರ್ ಅವರ ಪ್ರಸಿದ್ಧ ಚಿತ್ರ ಫಿರ್ ಹೆರಾ ಫೇರಿಯ ‘ಪೈಸಾ ಹಿ ಪೈಸಾ ಹೋಗಾ’ ಡೈಲಾಗ್ ಹಾಗೂ ಧನುಷ್ ಅವರ ʼವೈ ದಿಸ್ ಕೊಲವೆರಿ ಡಿʼ ಹಾಡು ಈ ವಿಡಿಯೋಗೆ ಮಿಕ್ಸ್ ಮಾಡಿ ರಂಜನೀಯಗೊಳಿಸಿ ಜಾಲತಾಣದಲ್ಲಿ ಹರಿಯಬಿಡಲಾಗಿದೆ.