ಶ್ರೀಲಂಕಾದ ಗಲ್ಲಿ ಗಲ್ಲಿಗಳಲ್ಲಿ ಜನರು ಅಗತ್ಯ ವಸ್ತುಗಳಿಗಾಗಿ ಗಂಟೆಗಟ್ಟಲೆ ಜನರು ಕಾಯ್ತಾ ನಿಂತಿರೋ ದೃಶ್ಯ ಕಾಮನ್ ಆಗಿದೆ. ಇನ್ನು ಅಡುಗೆ ಅನಿಲಕ್ಕಾಗಿ ಕಿತ್ತಾಟ ಮಾಡೋದು, ಒಂದು ಹನಿ ಪೆಟ್ರೋಲ್ಗಾಗಿ ಸರದಿಯಲ್ಲಿ ನಿಂತಿರೋದು ಅಲ್ಲಲ್ಲಿ ನೋಡಲು ಸಿಗ್ತಿವೆ. ಇದು ಇಲ್ಲಿನ ಪ್ರಸೆಂಟ್ ಕಂಡಿಶನ್. ಕೈಯಲ್ಲಿ ಕಾಸಿಲ್ಲದ ಜನರು ಹೇಗ್ಹೇಗೆ ಪರದಾಡ್ತಿದ್ದಾರೆ ಅನ್ನೋದಕ್ಕೆ ಈ ದೃಶ್ಯಗಳೇ ಸಾಕ್ಷಿಯಾಗಿವೆ. ಅದರಲ್ಲೂ ಇತ್ತೀಚೆಗೆ ವೈರಲ್ ಆದ ಈ ವಿಡಿಯೋ ಶ್ರೀಲಂಕಾದ ಚಿತ್ರಣ ಹೇಗಿದೆ ಅನ್ನೋದನ್ನ ಸ್ಪಷ್ಟವಾಗಿ ಹೇಳುವಂತಿದೆ.
ಶ್ರೀಲಂಕಾದ ಈ ಕೆಂಪು ಬಸ್ನ್ನ ನೋಡಿ, ತಕ್ಷಣವೇ ನಮ್ಮ ಬಿಎಂಟಿಸಿ, ಕೆಎಸ್ಆರ್ಟಿಸಿ ಬಸ್ ಜನರಿಂದ ತುಂಬಿರೋದು ನೆನಪಾಗಿ ಬಿಡುತ್ತೆ. ಕುತ್ಕೊಳ್ಳೊದಕ್ಕಿರಲಿ, ಒಂದು ಕಾಲು ಕೂಡಾ ಇಡೋದಕ್ಕೆ ಅಲ್ಲಿ ಜಾಗ ಇರುವುದಿಲ್ಲ. ಇನ್ನೂ ಹಳ್ಳಿಗಳಲ್ಲಂತೂ ಬಸ್ ಟಾಪ್ ಹತ್ತಿ ಜನರು ಕೂತಿರುತ್ತಾರೆ. ಆದರೆ ಇದು ಶ್ರೀಲಂಕಾ, ಇಲ್ಲಿ ಜನರು ದುಡ್ಡು ಕೊಟ್ಟು ಒಂದು ಕಡೆಯಿಂದ ಇನ್ನೊಂದು ಕಡೆ ಪ್ರಯಾಣ ಮಾಡುವುದಕ್ಕೆ ದುಡ್ಡಿಲ್ಲದೇ ಒದ್ದಾಡುತ್ತಿದ್ದಾರೆ. ಅದಕ್ಕೆ ಬಸ್ ಒಳಗೆ ಖರ್ಚೆ ಇಲ್ಲದೆ ಪ್ರಯಾಣ ಮಾಡ್ತಿದ್ದಾರೆ. ಅದು ಕೂಡಾ ಬಸ್ನ ಹಿಂಭಾಗದಲ್ಲಿ ಲಗೇಜ್ ಇಡುವ ಜಾಗದಲ್ಲಿ ಒಬ್ಬರ ಮೇಲೆ ಇನ್ನೊಬ್ಬರು ಕೂತು ಪ್ರಯಾಣಿಸುತ್ತಿದ್ದಾರೆ.
ಸೇಮ್ ಟು ಸೇಮ್ ಕುರಿಗಳು ತುಂಬಿರೋ ಹಾಗೆ ಜನರು ಇಲ್ಲಿ ತುಂಬಿದ್ದಾರೆ. ಅಷ್ಟೇ ಅಲ್ಲ ವಿದ್ಯಾರ್ಥಿಗಳು ಕಿಟಕಿಯಲ್ಲಿ, ಬಾಗಿಲಲ್ಲಿ ಜೋತಾಡಿಕೊಂಡೇ ಪ್ರಯಾಣ ಮಾಡ್ತಿರೋದನ್ನ ನೋಡಬಹುದು. ಜನರಿಂದ ತುಂಬಿತುಳುಕಾಡ್ತಿದ್ದ ಈ ಬಸ್ ವಿಡಿಯೋವನ್ನ ಅಲ್ಲಿದ್ದವರೇ ಒಬ್ಬರು ರಿಕಾರ್ಡ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ.