
ಪಾಕಿಸ್ತಾನದ ಅಜಿಮಾ ಇಹ್ಸಾನ್ ಎಂಬ ಮಹಿಳೆ ವಿಚ್ಛೇದನವಾದ ಸಂಭ್ರಮವನ್ನು ಆಚರಿಸಿಕೊಂಡಿದ್ದಾರೆ. ಇವರು ವಿಚ್ಛೇದನವಾದ ಎರಡು ವರ್ಷಗಳ ಸಂಭ್ರಮವನ್ನು ವಿಡಿಯೋ ಮೂಲಕ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಡ್ಯಾನ್ಸ್ ಮಾಡುವುದರ ಮೂಲಕ ಸಂಭ್ರಮವನ್ನು ಆಚರಿಸಿಕೊಂಡಿದ್ದಾರೆ.
ಅಜಿಮಾ ಕೋಕ್ ಸ್ಟುಡಿಯೋ ಪಾಕಿಸ್ತಾನದ ‘ಮಘ್ರೋನ್ ಲಾ’ ಹಾಡಿಗೆ ನೃತ್ಯ ಮಾಡುವುದರ ಮೂಲಕ ಸಂಭ್ರಮವನ್ನು ಆಚರಿಸಿಕೊಂಡಿದ್ದಾರೆ. ಮದುವೆಯ ಸಮಯದಲ್ಲಿ ವಧುಗಳು ಧರಿಸುವ ಲೆಹೆಂಗಾದಂತೆಯೇ ಆಕೆ ಮನೋಜ್ಞ ಹಾಡಿಗೆ ನರ್ತಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅಜಿಮಾ ಮೂರು ಮಕ್ಕಳ ತಾಯಿಯಾಗಿದ್ದು, ವಿಚ್ಛೇದಿತ ಮಹಿಳೆಯಾಗಿದ್ದಾರೆ. ವಿಚ್ಛೇದನದ ಬಗ್ಗೆ ಸಮಾಜದಲ್ಲಿ ಇರುವ ತಪ್ಪು ಕಲ್ಪನೆಯನ್ನು ಹೋಗಲಾಡಿಸುವ ಪ್ರಯತ್ನ ಮಾಡಿದ್ದಾರೆ. ವಿಚ್ಛೇದನವನ್ನು ಪಾಕಿಸ್ತಾನಿ ಸಮುದಾಯದಲ್ಲಿ, ವಿಶೇಷವಾಗಿ ಮಹಿಳೆಯರಿಗೆ “ಮರಣದಂಡನೆ” ಎಂದು ಪರಿಗಣಿಸಲಾಗುತ್ತದೆ ಎಂದು ಅಜಿಮಾ ಹೇಳಿದ್ದಾರೆ. “ನಾವು “ವಿಚ್ಛೇದನ” ವನ್ನು ಕೊಳಕು ಪದದಂತೆ ನೋಡುತ್ತೇವೆ…… ಹೌದು, ಇದು ಕಷ್ಟ ಮತ್ತು ಹೃದಯ ವಿದ್ರಾವಕ”, ಎಂದು ಆಕೆ ಬರೆದಿದ್ದಾರೆ.
ಅಜಿಮಾ ತಾನು ಸಂತೋಷದಿಂದ ವಿಚ್ಛೇದನ ಪಡೆದಿದ್ದೇನೆ ಎಂದು ಹೇಳಿದ್ದಾರೆ. “ನಾನು ಅದರ ಮೂಲಕ ನೃತ್ಯ ಮಾಡುತ್ತೇನೆ. ನಾನು ಅದರ ಮೂಲಕ ನಗುತ್ತೇನೆ. ಜೀವನವು ನಾನು ಹೇಳಿದಷ್ಟು ಕೆಟ್ಟದ್ದಲ್ಲ. ವಾಸ್ತವವಾಗಿ ವಿರುದ್ಧವಾಗಿದೆ”, ಎಂದು ಆಕೆ ಪೋಸ್ಟ್ ಮಾಡಿದ್ದಾರೆ.
View this post on Instagram