ಇಂದಿನ ಕಾಲಮಾನದಲ್ಲಿ ಮನೆಮನೆಯಲ್ಲೂ ಸ್ಮಾರ್ಟ್‌ಫೋನ್‌ಗಳನ್ನು ನೋಡಬಹುದಾಗಿದೆ. ಪಿಸಿಗಳಿಗಿಂತಲೂ ಸ್ಮಾರ್ಟ್‌ಫೋನ್‌ಗಳಲ್ಲೇ ಅಂತರ್ಜಾಲದ ಬಳಕೆ ಹೆಚ್ಚಾಗಿರುವ ಈ ಕಾಲದ ಮಕ್ಕಳಿಗೆ ಬೇಸಿಕ್ ಟೆಲಿಫೋನ್ ಬಳಕೆಯ ದಿನಗಳ ಸಾಕ್ಷಾತ್ ದರ್ಶನವಾಗಿಲ್ಲ.
ದೊಡ್ಡದೊಂದು ಡೈಯಲಿಂಗ್ ಗ್ರಿಡ್ ಇದ್ದ ಪೆಟ್ಟಿಗೆಗೆ ವೈರ್ ಮೂಲಕ ಸಂಪರ್ಕಿಸಲಾದ ರಿಸೀವರ್ ಹಾಗೂ ಮೈಕ್ ಇದ್ದ ಫೋನ್‌ಗಳ ಬದಲಿಗೆ ವೈರ್‌ಲೆಸ್ ಹೆಡ್‌ಸೆಟ್‌ನ ಫೋನ್ ಬಂದ ಕಾಲದ ಜಾಹೀರಾತಿನ ವಿಡಿಯೋವೊಂದನ್ನು ಹಿಸ್ಟಾರಿಕ್ ವಿಡ್ಸ್ ಹೆಸರಿನ ಟ್ವಿಟರ್ ಹ್ಯಾಂಡಲ್ ಒಂದು ಶೇರ್ ಮಾಡಿದೆ.
ಮನೆಗೆಲಸ ಹಾಗೂ ಕಚೇರಿಯ ಕೆಲಸ ನಡುವೆ ಫೋನ್‌ಗಳಲ್ಲಿ ಮಾತನಾಡಲು ಜನರು ಪರದಾಡುತ್ತಿರುವುದನ್ನು ತೋರುವ ಈ ವಿಡಿಯೋದಲ್ಲಿ, ವೈರ್‌ಲೆಸ್ ಹೆಡ್‌ಸೆಟ್‌ನಿಂದಾಗಿ ಈ ತಲೆನೋವೆಲ್ಲಾ ಇರೋದಿಲ್ಲ ಎಂದು ಹೇಳಲಾಗುತ್ತದೆ. ಈ ಹೆಡ್‌ಸೆಟ್‌ಗಳನ್ನು ಹಾಕಿಕೊಂಡು ಜನರು ತಮ್ಮ ದೈನಂದಿನ ಕೆಲಸಗಳಲ್ಲಿ ಎಂದಿನಂತೆ ಭಾಗಿಯಾಗುತ್ತಲೇ ಫೋನ್‌ನಲ್ಲಿ ಮಾತನಾಡಬಹುದು ಎಂದು ಜಾಹೀರಾತಿನಲ್ಲಿ ಹೇಳಲಾಗಿದ್ದು, ಈ ಸಾಧನಕ್ಕೆ ಅಂದಿನ ಕಾಲದಲ್ಲೇ $1,295 ವೆಚ್ಚವಾಗುತ್ತಿತ್ತು.
https://twitter.com/thisiselbee/status/1639888007057801224?ref_src=twsrc%5Etfw%7Ctwcamp%5Etweetembed%7Ctwterm%5E1639888007057801224%7Ctwgr%5Ef217954c19b0511d750ddf972d9f7872827a95af%7Ctwcon%5Es1_&ref_url=https%3A%2F%2Fwww.news18.com%2Fbuzz%2Fviral-video-old-commercial-of-hands-free-telephone-headset-leaves-internet-nostalgic-7388305.html
https://twitter.com/milfnationrise/status/1639852405532524550?ref_src=twsrc%5Etfw%7Ctwcamp%5Etweetembed%7Ctwterm%5E1639852405532524550%7Ctwgr%5Ef217954c19b0511d750ddf972d9f7872827a95af%7Ctwcon%5Es1_&ref_url=https%3A%2F%2Fwww.news18.com%2Fbuzz%2Fviral-video-old-commercial-of-hands-free-telephone-headset-leaves-internet-nostalgic-7388305.html