ಕೆಲವು ಮನೆಗಳಲ್ಲಿ ನಾಯಿಗಳನ್ನ ಮುದ್ದು ಮುದ್ದಾಗಿ ಸಾಕೋದನ್ನ ನೋಡಿದ್ದಿರಾ. ಜೀವಕ್ಕೆ ಜೀವ ಅನ್ನೊ ಹಾಗೆ, ಮನೆಯ ಸದಸ್ಯನಂತೆ ಪ್ರೀತಿ ಕಾಳಜಿಯಿಂದ ನೋಡಿಕೊಳ್ತಿರ್ತಾರೆ. ಅಂಥಾ ನಾಯಿಗಳಿಗೆ ಚೂರು ಚೂರು ಏನಾದ್ರೂ ಆದ್ರೆ ಸಾಕು, ಅವರು ಅದನ್ನ ತಡೆದುಕೊಳ್ಳೊದೇ ಕಷ್ಟ. ಎಷ್ಟೋ ಜನ ಖಿನ್ನತೆಗೂ ಒಳಗಾಗಿದ್ದು ಇದೆ. ಕೆಲವೇ ಕೆಲವು ದಿನಗಳ ಹಿಂದೆ ಅನ್ನಾ ಅನ್ನುವ ಮಹಿಳೆಯ ಮುದ್ದಿನ ನಾಯಿ ಅಚಾನಕ್ ಆಗಿ ಸತ್ತು ಹೋಗಿದೆ. ಆ ದುಃಖ ಭರಿಸಲಾಗದ ಮಹಿಳೆ ಆ ನಾಯಿಗಾಗಿ ಮಾಡಿದ್ದೇನು ಅಂತ ಗೊತ್ತಾದ್ರೆ ನೀವು ಶಾಕ್ ಆಗ್ತಿರಾ..!
ಅನ್ನಾಗೆ ತನ್ನ ನಾಯಿ ಪಿಟ್ಬುಲ್ ಪ್ರಪಂಚವೇ ಆಗಿತ್ತು. ತನ್ನ ಖುಷಿ, ನೋವು ಏನೇ ಇದ್ದರೂ ಆಕೆ ಮೊದಲು ಹಂಚಿಕೊಳ್ಳುತ್ತಿದ್ದುದೇ ಅದರೊಂದಿಗೆ. ಅದು ಆಕೆಯ ಪಾಲಿಗೆ ಮುದ್ದಿನ ನಾಯಿ ಅನ್ನೋದಕ್ಕಿಂತ ಹೆಚ್ಚಾಗಿ ಗೆಳೆಯನಂತಿತ್ತು. ಅಷ್ಟು ಪ್ರೀತಿಸುತ್ತಿದ್ದ ನಾಯಿ ಕೊನೆಯುಸಿರೆಳೆದಿದ್ದು ಕೂಡಾ ಆಕೆಯ ಮಡಿಲಲ್ಲೇ. ಅದು ಆಕೆಗೆ ಆಘಾತ ನೀಡಿತ್ತು. ಈ ನೋವಿನಿಂದ ಹೊರ ಬರಲಾರದೇ ಆಕೆ ಒದ್ದಾಡುತ್ತಿದ್ದಳು. ಕೊನೆಗೆ ಆಕೆ ತನ್ನ ಪ್ರೀತಿಯ ನಾಯಿಯ ನೆನಪಿಗಾಗಿ, ಅದಕ್ಕೆ ಶ್ರದ್ಧಾಂಜಲಿ ಕೊಡುವುದಕ್ಕಾಗಿ ತನ್ನ ಎರಡೂ ಕಿವಿಗಳ ಮೇಲೆ ಟ್ಯಾಟೂ ಹಾಕಿಸಿಕೊಂಡಿದ್ದಾಳೆ.
ಅನ್ನಾ ಎರಡೂ ಕಿವಿಗಳ ಮೇಲೆ ಟ್ಯಾಟೂ ಹಾಕಿಸಿಕೊಂಡು ತನ್ನ @garbage.bird ಅನ್ನೊ ಹೆಸರಿನ ಟಿಕ್ಟಾಕ್ ಅಕೌಂಟ್ನಲ್ಲಿ ಫೋಟೋಗಳನ್ನ ಫೋಸ್ಟ್ ಮಾಡಿದ್ದಾಳೆ. ಇದನ್ನ ನೋಡಿ ಅನೇಕರು ಕನ್ಫ್ಯೂಸ್ ಆಗಿದ್ದಾರೆ. ಯಾಕಂದರೆ ಒಂದು ಕಿವಿಯ ಮೇಲೆ ‘V‘ ಆಕಾರದ ಚಿತ್ರ ಇದ್ದರೆ, ಇನ್ನೊಂದು ಕಿವಿಯ ಮೇಲೆ ಅದರ ವಿರುದ್ಧ ಆಕಾರ. ಇದರ ಅರ್ಥ ಗೊತ್ತಾಗದೇ ಕಾಮೆಂಟ್ ಬಾಕ್ಸ್ನಲ್ಲಿ ಅನ್ನಾಗೆ ಇದರ ಅರ್ಥ ಕೇಳಿದ್ದಾರೆ. ಆಗ ಅನ್ನಾ ಈ ಕಿವಿಗಳ ಫೋಟೋ ಜೊತೆ ಜೊತೆಗೆ ತನ್ನ ಮುದ್ದಿನ ನಾಯಿಯ ಫೋಟೋ ಶೇರ್ ಮಾಡಿದ್ದಾರೆ. ಈ ಫೋಟೋ ನೋಡಿ ನೆಟ್ಟಿಗರು ಭಾವುಕರಾಗಿದ್ದಾರೆ. ಈ ಫೋಟೋದಲ್ಲಿ ಪಿಟ್ಬುಲ್ ಕಿವಿ ಆಕಾರ ಹೊಂದುತ್ತಿದೆ.
ಅನ್ನಾ ಮೂಕ ಜೀವಿಯ ಮೇಲೆ ಇಟ್ಟಿರುವ ಪ್ರೀತಿ ನೋಡಿ ನೆಟ್ಟಿಗರು ಮೂಕರಾಗಿದ್ದಾರೆ. ಅದನ್ನ ಕಾಮೆಂಟ್ ಬಾಕ್ಸ್ನಲ್ಲೂ ನೋಡಬಹುದಾಗಿದೆ. ಒಬ್ಬರು“ ನೀವು ನಿಮ್ಮ ಮುದ್ದಿನ ನಾಯಿ ಕಳೆದುಕೊಂಡಿದ್ದಕ್ಕೆ ಬೇಸರವಿದೆ. ಅದು ಬೆಲೆಕಟ್ಟಲಾಗದ್ದು“ ಅಂತ ಬರೆದಿದ್ದಾರೆ. ಇನ್ನೊಬ್ಬರು“ ಮುದ್ದಿನ ನಾಯಿಗೆ ಮುದ್ದಿನ ಶ್ರದ್ಧಾಂಜಲಿ“ ಎಂದು ಬರೆದಿದ್ದಾರೆ.
ಅದೇ ರೀತಿ ಇನ್ನೊಬ್ಬರು “ ಅನ್ನಾ ಅವರೇ ನಿಮ್ಮ ಈ ವಿಡಿಯೋವನ್ನ ನೋಡಿದೆ. ನನ್ನ ಕಣ್ಣೀರನ್ನ ತಡೆದುಕೊಳ್ಳೊದಕ್ಕೆ ಸಾಧ್ಯವೇ ಆಗಿಲ್ಲ“ ಇದೇ ರೀತಿ ಇನ್ನೂ ರಾಶಿ ರಾಶಿ ಕಾಮೆಂಟ್ಗಳು ಅನ್ನಾ ಅವರ ಕಾಮೆಂಟ್ ಬಾಕ್ಸ್ನಲ್ಲಿ ಬಿದ್ದಿದೆ.