![viral video of weird gift to bride stuns groom funny video | Viral Video: शादी में दुल्हन को मिला 'अजीब' गिफ्ट, देखकर बिगड़ गया दुल्हे का हाल | Hindi News, जरा हटके](https://hindi.cdn.zeenews.com/hindi/sites/default/files/2021/06/09/842815-viral-video-of-weird-gift.jpg)
ಮದುವೆ ಸಂದರ್ಭದಲ್ಲಿ ಹಾಸ್ಯ ಪ್ರಕರಣಗಳು ನಡೆಯುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. ವಿವಾಹಗಳ ಅನೇಕ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿರುತ್ತವೆ. ಮತ್ತೊಂದು ತಮಾಷೆ ವಿಡಿಯೋ ಸಾಮಾಜಿಕ ಜಾಲತಾಣ ಇನ್ಸ್ಟ್ರಾಗ್ರಾಮ್ ನಲ್ಲಿ ವೈರಲ್ ಆಗಿದೆ. ಈ ಮದುವೆಯಲ್ಲಿ ಸ್ನೇಹಿತ ವಧುವಿಗೆ ನೀಡಿದ ಉಡುಗೊರೆ ಎಲ್ಲರ ನಗುವಿಗೆ ಕಾರಣವಾಗಿದೆ.
ಇನ್ಸ್ಟಾಗ್ರಾಮ್ ನಲ್ಲಿ ವಿವಾಹದ ವಿಡಿಯೋ ವೈರಲ್ ಆಗಿದೆ. ವಧು-ವರರು ವೇದಿಕೆ ಮೇಲೆ ಕುಳಿತಿದ್ದಾರೆ. ಸ್ನೇಹಿತರು ಅವರ ಸುತ್ತ ಕುಳಿತಿದ್ದಾರೆ. ಸ್ನೇಹಿತ ವಧುವಿಗೆ ಉಡುಗೊರೆಯೊಂದನ್ನು ನೀಡ್ತಾನೆ. ಅದನ್ನು ನೋಡಿದ ವಧು ಹಾಗೂ ವರ ಇಬ್ಬರೂ ಆಶ್ಚರ್ಯಕ್ಕೊಳಗಾಗ್ತಾರೆ. ವಧುವಿಗೆ ಸ್ನೇಹಿತ ಲಟ್ಟಣಿಗೆ ಹಾಗೂ ಇಕ್ಕಳವನ್ನು ಉಡುಗೊರೆಯಾಗಿ ನೀಡಿದ್ದಾನೆ.
ಅಡುಗೆ ಮನೆ ವಸ್ತುಗಳನ್ನು ಉಡುಗೊರೆಯಾಗಿ ನೀಡುವುದು ಸಾಮಾನ್ಯ. ಆದ್ರೆ ಲಟ್ಟಣಿಗೆ ನೀಡಿರುವುದು ನೆರೆದಿದ್ದವರ ನಗುವಿಗೆ ಕಾರಣವಾಗಿದೆ.
https://www.instagram.com/p/CP2UyDTFrT8/?utm_source=ig_web_copy_link