ಆಧುನಿಕ ಯುಗವು ಸಾಮಾಜಿಕ ಜಾಲತಾಣಗಳ ಯುಗವೂ ಆಗಿರುವುದರಿಂದ ಜಗತ್ತಿನ ಯಾವುದೇ ಮೂಲೆಯಲ್ಲಿ ಯಾವುದೇ ಅಚ್ಚರಿಯ ಘಟನೆ ನಡೆಯಲಿ, ಯಾವುದೇ ವಿಷಯಕ್ಕೆ ಸಂಬಂಧಿಸಿದ ಸುದ್ದಿಯಾಗಲಿ, ಕ್ಷಣ ಮಾತ್ರದಲ್ಲಿ ಜಗತ್ತಿನಾದ್ಯಂತ ತಲುಪಿಸುವ ಶಕ್ತಿ ಹೊಂದಿವೆ.
ಇದಕ್ಕೆ ನಿದರ್ಶನ ಎಂಬಂತೆ, ಹಿಮಚ್ಛಾದಿತ ಪ್ರದೇಶದಲ್ಲಿ ವ್ಯಕ್ತಿಗಳಿಬ್ಬರು ಕರಡಿ ಜತೆ ವ್ಯಾಯಾಮ ಮಾಡಿದ ವಿಡಿಯೋ ಈಗ ಜಾಲತಾಣಗಳಲ್ಲಿ ಸಂಚಲನ ಸೃಷ್ಟಿಸಿದೆ.
ಸರ್ಟಿಫೈಡ್ ವಕಾಬೋನ್ ಎಂಬ ಟ್ವಿಟರ್ ಖಾತೆಯಿಂದ ವಿಡಿಯೋ ಅಪ್‌ಲೋಡ್ ಆಗಿದೆ. ಇಬ್ಬರು ವ್ಯಕ್ತಿಗಳು ಹಿಮಚ್ಛಾದಿತ ಪ್ರದೇಶದಲ್ಲಿ ವ್ಯಾಯಾಮ ಮಾಡುತ್ತಿದ್ದಾರೆ. ಒಬ್ಬ ವ್ಯಕ್ತಿಯು ಮರಕ್ಕೆ ಜೋತು ಬಿದ್ದು ಪುಲ್-ಅಫ್ಸ್ ಮಾಡುತ್ತಿದ್ದರೆ, ಮತ್ತೊಬ್ಬರು ಬಾಕ್ಸಿಂಗ್ ಮಾಡಿದ್ದಾರೆ. ಆದರೆ, ಅಚ್ಚರಿ ಎಂಬಂತೆ ದೊಡ್ಡ ಕರಡಿಯೊಂದು ಇವರ ಜತೆಗೆ ಮರದ ಕಟ್ಟಿಗೆ ಹಿಡಿದು ‘ಪುಶ್‌ಅಫ್ಸ್’ ಮಾಡಿರುವ ದೃಶ್ಯಗಳು 30 ಸೆಕೆಂಡ್‌ನ ವಿಡಿಯೋದಲ್ಲಿ ದಾಖಲಾಗಿವೆ.
ಕೊರೊನಾ ಸಂದರ್ಭದಲ್ಲಿ ಅತಿ ಹೆಚ್ಚು ಬಳಕೆಯಾದ ʼಡೋಲೋ 650ʼ ಕುರಿತು ಇಲ್ಲಿದೆ ಇಂಟ್ರಸ್ಟಿಂಗ್ ಮಾಹಿತಿ
ವಿಡಿಯೋವನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡುತ್ತಲೇ ಜನರಿಂದ ಭಾರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದುವರೆಗೆ ಸುಮಾರು ಮೂರು ಕೋಟಿ ಜನ ವಿಡಿಯೋವನ್ನು ವೀಕ್ಷಿಸಿದ್ದಾರೆ. ಒಂದು ಲಕ್ಷಕ್ಕೂ ಅಧಿಕ ಜನ ರೀಟ್ವೀಟ್ ಮಾಡಿದ್ದಾರೆ. ಸಾವಿರಾರು ಜನರು ಪ್ರತಿಕ್ರಿಯೆಯನ್ನೂ ತಿಳಿಸಿದ್ದಾರೆ.
’ಕರಡಿಯು ಊಟಕ್ಕೂ ಮುನ್ನ ಆಹಾರವನ್ನು ಬಿಸಿ ಮಾಡುತ್ತಿದೆ’ ಎಂದು ಒಬ್ಬರು ಪ್ರತಿಕ್ರಿಯಿಸಿದರೆ, ’ಇದು ತಿರುಚಿದ ವಿಡಿಯೋ’ ಎಂದು ಮತ್ತೊಬ್ಬರು ತಿಳಿಸಿದ್ದಾರೆ.
ಹಾಗೆಯೇ, ವರದಿ ಪ್ರಕಾರ ಇದು ರಷ್ಯಾದ ಅರಣ್ಯ ಪ್ರದೇಶವೊಂದರಲ್ಲಿ ಮಾಡಲಾದ ವಿಡಿಯೋ ಎಂದು ತಿಳಿದುಬಂದಿದೆ. ಒಟ್ಟಿನಲ್ಲಿ ಕರಡಿ ಜತೆ ವ್ಯಾಯಾಮ ಮಾಡಿದ ಇಬ್ಬರು ವ್ಯಕ್ತಿಗಳ ಧೈರ್ಯವನ್ನು ಮೆಚ್ಚಲೇಬೇಕಾಗಿದೆ.