ಈಗಿನ ಮಕ್ಕಳು ಅಡುಗೆ ಮನೆ ಕಡೆ ಬರುವುದೇ ಇಲ್ಲ ಎನ್ನುವ ಮಾತಿದೆ. ಆದರೆ ಇಲ್ಲೊಂದು ವಿಡಿಯೋ ನೋಡಿದರೆ ನೀವು ಖಂಡಿತವಾಗಿಯೂ ಹುಬ್ಬೇರಿಸುತ್ತೀರಾ. ಪುಟ್ಟ ಬಾಲಕನೊಬ್ಬ ತಿಂಡಿ ಮಾಡುತ್ತಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದು.
ಪುಟಾಣಿ ಬಾಣಸಿಗ ಸ್ಯಾಂಡ್‌ವಿಚ್ ಮಾಡುವ ವಿಡಿಯೋ ಇದೀಗ ವೈರಲ್ ಆಗಿದ್ದು, ನೋಡುಗರನ್ನು ಖುಷಿಯಲ್ಲಿ ತೇಲಿಸುತ್ತದೆ.
ಈ ವಿಡಿಯೋವನ್ನು ಫಿಗೆನ್ ಎನ್ನುವವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಪುಟಾಣಿ ಬಾಲಕನೊಬ್ಬ ಒಲೆ ಮುಂದೆ ಕುಳಿತುಕೊಂಡಿದ್ದಾನೆ. ರೋಸ್ಟ್ ಮಾಡಲು ತಟ್ಟೆಯಲ್ಲಿ ಬ್ರೆಡ್ ತುಂಡು ಹಾಕುತ್ತಾನೆ. ಅದನ್ನು ಫ್ರೈ ಮಾಡುತ್ತಾನೆ. ಇನ್ನೊಂದು ಕಡೆ ಮೊಟ್ಟೆ ಒಡೆದು ಹಾಕುತ್ತಾನೆ. ನಂತರ ಮೊಟ್ಟೆ ಆಮ್ಲೇಟ್ ಆದ ಮೇಲೆ ಬ್ರೆಡ್ ಎರಡು ಭಾಗ ಮಾಡಿ ಅದರೊಳಗೆ ಹಾಕಿ ತಿನ್ನುತ್ತಾನೆ.
ವೀಡಿಯೊ ಈಗಾಗಲೇ 223k ವೀಕ್ಷಣೆಗಳನ್ನು ಮತ್ತು ಟನ್‌ಗಳಷ್ಟು ಪ್ರತಿಕ್ರಿಯೆಗಳನ್ನು ಗಳಿಸಿದೆ. ಮಗುವಿನ ಕೌಶಲಕ್ಕೆ ನೆಟ್ಟಿಗರು ತಲೆಬಾಗಿದ್ದಾರೆ.