ರ್ಯಾಂಪ್ ವಾಕ್ ಮಾಡುವಾಗ ಏನಾದರೊಂದು ಎಡವಟ್ಟಾಗುವುದು ಸಾಮಾನ್ಯ. ಆದರೆ, ನಂತರ ಆ ರೂಪದರ್ಶಿ ಅದನ್ನು ಹೇಗೆ ಸ್ವೀಕರಿಸುತ್ತಾರೆ ಎಂಬುದು ಮುಖ್ಯವಾಗಿರುತ್ತದೆ. ಯಾಕೆಂದರೆ ಇಲ್ಲಿ ಆತ್ಮವಿಶ್ವಾಸ ಬಹಳ ಮುಖ್ಯವಾಗಿರುತ್ತದೆ. ಹಾಗೆಯೇ ಇಲ್ಲೊಬ್ಬಳು ಪುಟ್ಟ ಬಾಲಕಿ ಆತ್ಮವಿಶ್ವಾಸದ ನಡಿಗೆಗೆ ನೆಟ್ಟಿಗರು ತಲೆದೂಗಿದ್ದಾರೆ.
ಸದ್ಯ ವೈರಲ್ ಆಗಿರುವ ವಿಡಿಯೋದಲ್ಲಿ, ಚಿಕ್ಕ ಹುಡುಗ ಮತ್ತು ಹುಡುಗಿ ರ್ಯಾಂಪ್ ಮೇಲೆ ಹೆಜ್ಜೆಯಿಡುತ್ತಿರುವುದನ್ನು ನೋಡಬಹುದು. ಬಾಲಕ ಬಿಳಿ ಬಣ್ಣದ ಸೂಟ್-ಬೂಟ್ ಧರಿಸಿದ್ದರೆ, ಪುಟ್ಟ ಬಾಲಕಿ ಬಿಳಿ ಬಣ್ಣದ ಉಡುಪು ಧರಿಸಿದ್ದಾಳೆ.
ಭೋರ್ಗರೆಯುತ್ತಿರುವ ಜಲಪಾತದ ಬಂಡೆ ಬಳಿ ಸಿಲುಕಿಕೊಂಡ ತಾಯಿ – ಮಗು: ರಕ್ಷಣಾ ಕಾರ್ಯಾಚರಣೆಯ ರೋಚಕ ವಿಡಿಯೋ ವೈರಲ್
ಈ ಇಬ್ಬರೂ ರ್ಯಾಂಪ್ ಮೇಲೆ ವಾಕ್ ಮಾಡುತ್ತಿದ್ದರೆ ಅಲ್ಲಿ ಸೇರಿದ್ದ ಪ್ರೇಕ್ಷಕರು ಮಕ್ಕಳನ್ನು ಹುರಿದುಂಬಿಸಿದ್ದಾರೆ.
ಬಾಲಕಿಯ ಹಿಂದೆ ನಡೆಯುತ್ತಾ ಬಂದ ಬಾಲಕ ಅವಳಿಗೆ ಡಿಕ್ಕಿ ಹೊಡೆದಿದ್ದಾನೆ. ಇದರಿಂದ ಆಕೆ ಧರಿಸಿದ್ದ ಶೂ ತನ್ನ ಪಾದದಿಂದ ಹೊರಗೆ ಬಂದಿದೆ. ಇದನ್ನು ಬಾಲಕ ಆಕೆಗೆ ತೋರಿಸಿದ್ದಾನೆ. ಸ್ವಲ್ಪವೂ ವಿಚಲಿತಗೊಳ್ಳದ ಬಾಲಕಿ ಶೂ ಧರಿಸಿ, ತನ್ನ ತಲೆ ಮೇಲಿದ್ದ ಹೇರ್ ಬ್ಯಾಂಡ್ ಅನ್ನು ಸರಿಪಡಿಸಿಕೊಂಡಿದ್ದಾಳೆ. ಮತ್ತೆ ರ್ಯಾಂಪ್ ಮೇಲೆ ತನ್ನ ನಡಿಗೆಯನ್ನು ಮುಂದುವರೆಸಿರುವ ಕ್ಯೂಟ್ ವಿಡಿಯೋಗೆ ನೆಟ್ಟಿಗರು ಮನಸೋತಿದ್ದಾರೆ.
ನಟಿ ದಿಶಾ ಪಟಾನಿಯ ಬೀಚ್ ಫೋಟೋ ನೋಡಿ ಪಡ್ಡೆ ಹುಡುಗ್ರು ಕ್ಲೀನ್ ಬೋಲ್ಡ್..!
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ವಿಡಿಯೋವನ್ನು 5 ಮಿಲಿಯನ್ ಜನರು ವೀಕ್ಷಿಸಿದ್ದಾರೆ. ಗಟ್ಟಿಗಿತ್ತಿ ಬಾಲಕಿ ಅಂತೆಲ್ಲಾ ನೆಟ್ಟಿಗರು ಬಾಲಕಿಯನ್ನು ಪ್ರಶಂಸಿದ್ದಾರೆ.
https://youtu.be/ctDvJ3RMaWw